Karnataka 2nd puc Result 2025 : ದ್ವಿತೀಯ ಪಿಯುಸಿ ಫಲಿತಾಂಶ 2025 ಈ ದಿನ ಪ್ರಕಟ..! ಮಹತ್ವದ ಮಾಹಿತಿ ಇಲ್ಲಿದೆ
ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಲೇಖನದ ಮುಖಾಂತರ ತಿಳಿಸಲು ಬಯಸುವ ವಿಷಯವೆಂದರೆ. ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ 12ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆ ಮುಕ್ತಾಯಗೊಂಡಿದ್ದು. ಹಾಗೆಯೇ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಈ ವಾರ ಮುಕ್ತಾಯಗೊಳ್ಳುವ ನಿರೀಕ್ಷೆಯಿದ್ದು ಅಧಿಕೃತ ಫಲಿತಾಂಶ ಪ್ರಕಟಣೆಗೆ ಜನಗಣನೆ ಆರಂಭವಾಗಿದೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಫಲಿತಾಂಶದ ಪ್ರಕಟಣೆ ಕುರಿತು ಮಹತ್ವದ ಮಾಹಿತಿ ನೀಡಿದೆ.
ಸ್ನೇಹಿತರೆ ಕಳೆದ ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 7,13,862 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು ಈ ಪೈಕಿ 6,61, 474 ವಿದ್ಯಾರ್ಥಿಗಳು ಹಾಗೂ 34,071 ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 18,317 ಮಂದಿ ಖಾಸಗಿ ವಿದ್ಯಾರ್ಥಿಗಳಾಗಿದ್ದರು ರಾಜ್ಯದ 1171 ಪರಿಚಯ ಕೇಂದ್ರಗಳಲ್ಲಿ ಈ ಪರೀಕ್ಷೆಯನ್ನು ಆಯೋಜನೆ ಮಾಡಲಾಗಿತ್ತು.
Karnataka 2nd puc Result 2025 ಫಲಿತಾಂಶ ಪ್ರಕಟಣೆ ಯಾವಾಗ ?
ಸ್ನೇಹಿತರೆ ಕಳೆದ ವರ್ಷ ದ್ವಿತೀಯ ಪಿಯುಸಿ ಫಲಿತಾಂಶವನ್ನು ಏಪ್ರಿಲ್ 10 ರಂದು ಬಿಡುಗಡೆ ಮಾಡಲಾಗಿತ್ತು. ಈ ವರ್ಷವೂ ಸಹ ಸರಿಸುಮಾರು ಅದೇ ಸಮಯದಲ್ಲಿ ಫಲಿತಾಂಶ ಪ್ರಕಟಣೆ ಆಗುವ ಸಾಧ್ಯತೆ ಇದೆ. ಮೌಲ್ಯಮಾಪನ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿದ್ದು ಏಪ್ರಿಲ್ ಮೊದಲ ವಾರದೊಳಗೆ ಸಂಪೂರ್ಣಗೊಳಲಾಗಿದೆ. ವಿದ್ಯಾರ್ಥಿಗಳು ನಮ್ಮ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ನಲ್ಲಿ ನೋಡಬಹುದಾಗಿದೆ.
Karnataka 2nd puc Result 2025 ಫಲಿತಾಂಶ ನೋಡುವ ವಿಧಾನ.
ಸ್ನೇಹಿತರೆ ದ್ವಿತೀಯ ಪಿಯುಸಿ ಫಲಿತಾಂಶವೂ https://karresults.nic.in ಅಧಿಕೃತ ವೆಬ್ಸೈಟ್ ಗಳಲ್ಲಿ ಲಭ್ಯವಾಗಿರುತ್ತದೆ ವಿದ್ಯಾರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮುಖಾಂತರ ತಮ್ಮ ಪಲಿತಾಂಶವನ್ನು ವೀಕ್ಷಣೆ ಮಾಡಬಹುದು.
ಮೊದಲಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮುಖಾಂತರ ಹೋಂ ಪೇಜ್ ನಲ್ಲಿ 2nd PUC result 2025 ಲಿಂಕ್ನ ಮೇಲೆ ಕ್ಲಿಕ್ ಮಾಡಿಕೊಂಡು ನೋಂದಣಿ ಸಂಖ್ಯೆಯನ್ನು ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಫಲಿತಾಂಶ ನಿಮ್ಮ ಮುಂದೆ ತೋರಿಸುತ್ತದೆ.