Gruhalakshmi amount : ಈ ಜಿಲ್ಲೆಯ ಮಹಿಳೆಯರ ಖಾತೆಗೆ 1,095 ಕೋಟಿ ಗೃಹಲಕ್ಷ್ಮಿ ಹಣ ಜಮಾ ಮಾಡಲಾಗಿದೆ..!
ಸ್ನೇಹಿತರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಮೇಲೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು ಇವುಗಳಲ್ಲಿ ಪ್ರಮುಖ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆ ಅಡಿ ಹಣ ಬಿಡುಗಡೆ ಮಾಡುವ ಕುರಿತು ಪ್ರಮುಖ ಮಾಹಿತಿ ಈ ಲೇಖನದಲ್ಲಿ ನೋಡೋಣ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೇ 2025 ತಿಂಗಳಿನಲ್ಲಿ ಹಂತ ಹಂತವಾಗಿ ಇದೇ ತಿಂಗಳ 3 ಕಂತುಗಳನ್ನು ಒಟ್ಟು 6,000 ಹಣವನ್ನು ಒಟ್ಟಿಗೆ ಜಮಾ ಮಾಡಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದರು ಇನ್ನು ಕಟ್ಟಿನಲ್ಲಿ ಈ ಯೋಜನೆಯಡಿ ಫಲಾನುಭವಿಗಳು ಆರ್ಥಿಕ ನೆರವನ್ನು ನಿರೀಕ್ಷೆಯಲ್ಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆ ಯೋಜನೆಯ 1,095 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಆರ್ಥಿಕ ನೆರವು ಪಡೆಯಲು ಅರ್ಜಿಯನ್ನು ಸಲ್ಲಿಸಿದ ಅರ್ಹ ಮಹಿಳೆಯರಿಗೆ ಇಲ್ಲಿಯವರೆಗೂ ಒಟ್ಟು 1,095 ಕೋಟಿ ಆರ್ಥಿಕ ನೆರವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Gruhalakshmi amount ಶೇ 99.9% ರಷ್ಟು ಫಲಾನುಭವಿಗಳ ಈ ಯೋಜನೆ ಯಡಿ ಹಣ ವರ್ಗಾವಣೆ.
ಪ್ರಸ್ತುತ ಯೋಜನೆ ಇದೆ ಜಿಲ್ಲೆಯಲ್ಲಿ ಲಭ್ಯವಿರುವ ಒಟ್ಟು ಪಡಿತರ ಚೀಟಿದಾರರಲ್ಲಿ ಶೇಕಡ 99.9 ರಷ್ಟು ಗ್ರಾಹಕರಿಗೆ ಯೋಜನೆಯ ಆರ್ಥಿಕ ನೆರವು ಜಮ ಮಾಡಲಾಗಿದ್ದು ಒಟ್ಟು ಜಿಲ್ಲೆಯಲ್ಲಿ 3,61,481 ಪಡಿತರ ಚೀಟಿಗಳು ಅಸ್ತಿತ್ವದಲ್ಲಿ ಇದ್ದು ಟ್ಯಾಕ್ಸ್ ಪಾವತಿ ಮರಣ ಹೊಂದಿದವರು ಸೇರಿ ಒಟ್ಟು 25676 ಜನರು ಈ ಯೋಜನೆಯಿಂದ ಅನಾರರಾಗಿದ್ದಾರೆ.
ಬಾಕಿ ಉಳಿದ ಒಟ್ಟು 3,35, 805 ರೇಷನ್ ಕಾರ್ಡ್ ಫಲಾನುಭವಿಗಳಿಗೆ ಯೋಜನೆಯಡಿ ಪ್ರತಿ ತಿಂಗಳು ರೂಪಾಯಿ 2000 ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಯನ್ನು ಮಾಡಲಾಗುತ್ತಿದೆ.
Gruhalakshmi amount ಗೃಹಲಕ್ಷ್ಮೀ ಹಣ ಯಾವಾಗ ಜಮ ಮಾಡಲಾಗುತ್ತದೆ
ಗೃಹಲಕ್ಷ್ಮಿ ಯೋಜನೆ ಪ್ರತಿ ತಿಂಗಳು ರೂಪಾಯಿ 2000 ಹಣವನ್ನು ಪಡೆಯಲು ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ಫಲಾನುಭವಿಗಳು ಮಹಿಳೆಯರಿಗೆ ಒಟ್ಟು ಮೂರು ತಿಂಗಳ ಹಣ ಪಾವತಿ ಮಾಡುವುದನ್ನು ರಾಜ್ಯ ಸರ್ಕಾರದ ಬಾಕಿ ಉಳಿಸಿಕೊಂಡಿದ್ದು ಮೇ 20ರಂದು ಹೊಸಪೇಟೆಯಲ್ಲಿ ಗ್ಯಾರಂಟಿ ಯೋಜನೆ ಗಳ ಎರಡು ವರ್ಷಪೂರ್ಣಗೊಂಡಿರುವುದು ಸಂಬಂಧ ಕಾರ್ಯಕ್ರಮ ಮುಗಿಸಿದ ನಂತರ ಎಲ್ಲಾ ಫಲಾನುಭವಿಗಳಿಗೆ ಇದೇ ತಿಂಗಳಿನಲ್ಲಿ ಒಟ್ಟು ಮೂರು ಕಂತಿನ 6,000 ಹಣವನ್ನು ಜಮಾ ಮಾಡುವ ಸಾಧ್ಯತೆಗಳಿವೆ.