New ration card application :- ನಮಸ್ಕಾರ ಸ್ನೇಹಿತರೇ, ನಮ್ಮ ಮಾಹಿತಿ ಕಣಜ ಮಾಧ್ಯಮದ ಈ ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕೊಡಲಾಗಿದೆ ಆದರೆ ಸರ್ವರ್ ಕಾರಣದಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಮತ್ತು ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾದರೆ ಏನು ಮಾಡಬೇಕು ಈ ಚೇತನದ ಮೂಲಕ ತಿಳಿದುಕೊಳ್ಳಿ.
ಬೆಂಗಳೂರು ಗ್ರಾಮಾಂತರ :- ಹೌದು ಗೆಳೆಯರೇ ಕಳೆದ ಎರಡು ಮೂರು ದಿನಗಳ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ನೀಡಿದ ಎರಡು ಗಂಟೆ ಅವಧಿಯಲ್ಲಿ ಪದೇ ಪದೇ ಸರ್ವರ್ ಕೈ ಕೊಟ್ಟು ಕಾರಣದಿಂದ ಜನ ಅರ್ಜಿ ಸಲ್ಲಿಸಲು ಪರದಾಟ ನಡೆಸಿದ್ದಾರೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕೆಂದು ಬಹುವಚನಗಳಿಂದ ಕಾಯುತ್ತಿದ್ದ ಫಲಾನುಭವಿಗಳಿಗೆ ಆಸೆ ಈಡೇರಲಿಲ್ಲ.
( New ration card application ) ಅರ್ಜಿ ಸಲ್ಲಿಸಲು ಹೋದರೆ ಸರ್ವರ್ ಕಾಟ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸ ಪಡಿತರ ಚೀಟಿಗೆ ಅರ್ಜಿ ಮೋಟು ತಿದ್ದುಪಡಿ ಮುಕ್ತ ಅವಕಾಶ ನೀಡಿದೆ ಕೇವಲ ಒಂದೆರಡು ಗಂಟೆಗಳಷ್ಟು ಸಮಯ ನೀಡಿತ್ತು. ಈ ಸಮಯದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ತಿದ್ದುಪಡಿ ಮಾಡಿಸಲು ಅವಕಾಶವಿದೆ ಎಂದು ಬಂದರೆ ಸರ್ವರ್ ಸ್ಲೋ ಅಂದರೆ ಹೇಗೆ ಅಷ್ಟು ಮಾತ್ರಕ್ಕೆ ಅವಕಾಶ ಯಾಕೆ ನೀಡಬೇಕಿತ್ತು. ಅವಕಾಶ ನೀಡಿದ ಮೇಲೆ ಸರ್ವರ್ ಸಮಸ್ಯೆ ಸರಿಪಡಿಸಿ ಅವರ ನೀಡಬೇಕಿತ್ತು ಅಲ್ವಾ ಎಂದು ಜನ ಗ್ರಾಮ ಒನ್ ಕೇಂದ್ರ ಸಿಬ್ಬಂದಿಗಳ ಮೇಲೆ ಮುಗಿಬಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.
( New ration card application ) 2 ಗಂಟೆಯಲ್ಲಿ ಒಂದು ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಆಗಿಲ್ಲ ?
ಹೌದು ಸ್ನೇಹಿತರೆ ಇಲಾಖೆ 2 ದಿನಗಳ ಹಿಂದೆ ಬೆಳಗ್ಗೆ 10 ರಿಂದ ಮಧ್ಯಾಹ್ನ 12ರ ಗಂಟೆಯವರೆಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು ಮಧ್ಯಾಹ್ನದ ಮೇಲೆ ತಿದ್ದುಪಡಿಗೆ ಅವಕಾಶ ಎಂದು ಹೇಳಿದ್ದು ಫಲಾನುಭವಿಗಳು ಗ್ರಾಮ್ ಒನ್ ಕೇಂದ್ರಗಳಲ್ಲಿ ಬೇಟಿ ನೀಡಿದ್ದಾರೆ. ಫಲಾನುಭವಿಗಳಿಗೆ ಆ ಎರಡು ಗಂಟೆ ಅವಧಿಯಲ್ಲಿ ಪದೇಪದೇ ಸರ್ವರ್ ಡೌನ್ ಆಗುತ್ತಿದ್ದರಿಂದ ಒಂದೇ ಒಂದು ಅರ್ಜಿ ಕೂಡ ನೊಂದಾಯಿಸಲು ಸಾಧ್ಯವಾಗಿಲ್ಲ
ಫಲಾನುಭವಿಗಳು ಆಧಾರ್ ಕಾರ್ಡ್ ನಂಬರ್ ಹಾಕಿ ಮುಂದಕ್ಕೆ ಹೋಗುತ್ತಿದ್ದಂತೆ ಸರ್ವರ್ ಡೌನ್ ಆಗಿತ್ತು ಮತ್ತೆ ಸ್ವಲ್ಪ ಹೊತ್ತು ಬಿಟ್ಟು ಒಂದಿಷ್ಟು ಮಾಹಿತಿ ಹಾಕಿ ಮುಂದಕ್ಕೆ ಹೋಗುತ್ತಿದ್ದಂತೆ ಮತ್ತೆ ಸರ್ವರ್ ತೆಗಿತವಾಗಿದೆ ಇದರಿಂದ ಫಲಾನುಭವಿಗಳು ತುಂಬಾ ಗೊಂದಲಕ್ಕೇಡಗಿದ್ದಾರೆ.
(New ration card application) ಹಾಗಿದ್ದರೆ ಅರ್ಜಿ ಸಲ್ಲಿಸಲು ಏನು ಮಾಡಬೇಕು ?
ಸರ್ವಸ್ ಸ್ಲೋ ಇರುವುದರಿಂದ ಒಂದು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಕನಿಷ್ಠ ಎರಡು ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದೆ. ಮೊದಲ ಅಂತದಿಂದ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿ ಇನ್ನೇನು ಕಂಪ್ಲೀಟ್ ಆಯ್ತು ಅನ್ನುವಷ್ಟರಲ್ಲಿ ಸರ್ವರ್ ಕೈಕೊಡುತ್ತಿದೆ. ಹೀಗಾಗಿ ಒಂದು ಅರ್ಜಿಗೆ ದಿನವೆಲ್ಲ ಕಾಯಬೇಕು ಅನ್ನೋತರ ಹಾಗಿದೆ. ಇದಕ್ಕೆ ಏನು ಮಾಡಲು ಸಾಧ್ಯವಿಲ್ಲ ಸರ್ವರ್ ಯಾವಾಗ ಬರುತ್ತೆ ಅವಾಗಲೇ ಅರ್ಜಿ ಸಲ್ಲಿಸಬಹುದಾಗಿದೆ. ಮತ್ತೆ ಮುಂದಿನ ದಿನಗಳಲ್ಲಿ ಅರ್ಜಿ ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಲಾಗುತ್ತದೆ ಎಂದು ಇಲಾಖೆಯವರು ತಿಳಿಸಿದ್ದಾರೆ.
ಸರ್ವರ್ ಸಮಸ್ಯೆಯಿಂದ ಜನರಿಗೆ ಮಾತ್ರ ತೊಂದರೆ ಆಗಿಲ್ಲ. ಸೈಬರ್ ಸೆಂಟರ್ಗಳಿಗೂ ಸಹ ತುಂಬಾ ಸಮಸ್ಯೆಯಾಗಿದೆ ಆದ ಕಾರಣ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಇದರ ಬಗ್ಗೆ ಸ್ವಲ್ಪ ಗಮನಹರಿಸಬೇಕಾಗಿದೆ.
ಗಮನಿಸಿ :- ಈ ಲೇಖನ ನಿಮಗೆ ಇಷ್ಟ ವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬ ದವತೊಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೆ ರೀತಿಯ ಇನ್ನಷ್ಟು ಮಾಹಿತಿ ತಿಳಿದು ಕೊಳ್ಳಲು ನಮ್ಮ್ whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನಾಲೂ ಇದೆ ರೀತಿಯ ಅಪ್ಡೇಟ್ಸ್ ಗಳನ್ನು ತಿಳಿದುಕೊಳ್ಳಿ….