BPL ration card update :- ನಮಸ್ಕಾರ ಸ್ನೇಹಿತರೇ ನಮ್ಮ ಮಾಹಿತಿ ಕಣಜ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಿಳಿಸಲ ಬಯಸುವ ವಿಷಯವೇನೆಂದರೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳು ಕೆಲವು ಜಿಲ್ಲೆಗಳಿಗೆ ಮಾತ್ರ ವಿತರಣೆ ಮಾಡಲಾಗುತ್ತದೆ ಎಂಬ ಸುದ್ದಿ ತಿಳಿದು ಬಂದಿದೆ ಅದು ಯಾವ ಜಿಲ್ಲೆ ಎಂದು ನೋಡಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.
ಗೆಳೆಯರೇ ನೀವೇನಾದರೂ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯುವ ನಿರೀಕ್ಷೆಯಲ್ಲಿದ್ದರೆ ನಿಮಗೊಂದು ಶುಭ ಸುದ್ದಿ ಎಂದು ಹೇಳಬಹುದು. ಈ ಹಿಂದೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ ಅರ್ಜಿದಾರರ ಹೊಸ ಬಿಪಿಎಲ್ ಪಡಿತರ ಚೀಟಿಗಳನ್ನು ಸರ್ಕಾರ ಬಿಡುಗಡೆ ಮಾಡಲಿದ್ದು ಯಾವ ಯಾವ ಜಿಲ್ಲೆಗೆ ಅರ್ಜಿದಾರರಿಗೆ ಮೊದಲು ಹಂತದಲ್ಲಿ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ ಈ ಕೆಳಗೆ ನೋಡಿ.
(BPL ration card update) ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ.
ಸ್ನೇಹಿತರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಬಹುಮುಖ್ಯ ಧಾಖಲೆಯಾಗಿದೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರಿಗೆ ಸರ್ಕಾರ ಈ ದಾಖಲೆಯನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿಯಬಹುದು.
ರಾಜ್ಯ ಸರ್ಕಾರ ಸಾರ್ವತ್ರಿಕ ಚುನಾವಣೆಯ ಕಾರಣದಿಂದ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿಲೇವಾರಿಯನ್ನು ( BPL ration card update )ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಮತ್ತೆ ಅರ್ಹ ಫಲಾನುಭವಿಗಳಿಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಅವಕಾಶವನ್ನು ಮಾಡಿಕೊಟ್ಟಿದ್ದು ರಾಜ್ಯ ಸರ್ಕಾರದ ಮೊನ್ನೆಯಷ್ಟೇ ಹೊಸದಾಗಿ ಮನೆ ಮಾಡಿಸಿದವರಿಗೆ ಮತ್ತು ನೀಡಲಾಗಿತ್ತು.
(BPL ration card update) ಇನ್ನು 2.3 ಲಕ್ಷ ರೇಷನ್ ಕಾರ್ಡ್ ಅರ್ಜಿ ವಿಲೇವಾರಿ ಬಾಕಿ ಇವೆ .
ಗೆಳೆಯರೇ ಈ ಹಿಂದೆ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮೊದಲು ರೇಷನ್ ಕಾರ್ಡ್ ಉದಯವಾರಿಯನ್ನು ಮಾಡಿ ನಂತರ ಬಾಕಿ ಉಳಿದ ಅಥವಾ ಹೊಸದಾಗಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ನೀಡಲಾಗುವುದು. ಕರ್ನಾಟಕ ರಾಜ್ಯ ಸರ್ಕಾರದ ವರದಿಯಮೂಲಕ ನೋಡುವುದಾದ್ರೆ ಇನ್ನು 2.3 ಲಕ್ಷ ಅರ್ಜಿಗಳಿಗೆ ಬಿಪಿಎಲ್ ಕಾರ್ಡ್ ಗಳು ವಿಲೇವಾರಿ ಕೆಲಸ ಬಾಕಿ ಉಳಿದಿದೆ ಎಂದು ತಿಳಿಸಿದ್ದಾರೆ.
(BPL ration card update) ಮೊದಲು ರೇಷನ್ ಕಾರ್ಡ್ ಸಿಗಲಿರುವ ಜಿಲ್ಲೆಗಳ ಪಟ್ಟಿ ಇಂತಿದೆ.
ಸ್ನೇಹಿತರೆ ಸರ್ಕಾರ ಬಾಕಿ ಉಳಿದಿರುವ ಹಳೆಯ ಬಿಪಿಎಲ್ ರೇಷನ್ ಕಾರ್ಡ್ಗಳ ವಿಲೇವಾರಿ ಬಳಿಕ ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ವಿತರಿಸಬಹುದು ಎನ್ನಲಾಗಿದೆ. ಸರ್ಕಾರವು ಮೊದಲು ಹಂತದಲ್ಲಿ ಈ ಕೆಳಗಿನ ಜಿಲ್ಲೆಗಳಿಗೆ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
- ಚಿತ್ರದುರ್ಗ
- ದಾವಣಗೆರೆ
- ದಕ್ಷಿಣ ಕನ್ನಡ
- ಬಾಗಲಕೋಟೆ
- ಬೀದರ್
- ಹಾವೇರಿ
- ರಾಯಚೂರ
- ಕೊಪ್ಪಳ
- ಯಾದಗಿರಿ
- ವಿಜಯಪುರ
ಸ್ನೇಹಿತರೆ ಮೊದಲು ಈ ಮೇಲೆ ನೀಡಿರುವ ಎಲ್ಲಾ ಜಿಲ್ಲೆಗಳಿಗೆ ಬಿಪಿಎಲ್ ರೇಷನ್ ಕಾರ್ಡನ್ನು ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.
ಗಮನಿಸಿ :- ಈ ಲೇಖನ ನಿಮಗೆ ಇಷ್ಟಗನಿಸಿದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರ ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್ ಆಗಿ.