Busyness loan :- ನಮಸ್ಕಾರ ಗೆಳೆಯರೇ ಇಂದಿನ ಲೇಖನಕ್ಕೆ ಸ್ವಾಗತ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ನಿಮಗೇನಾದರು ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಯೋಚನೆ ಇದ್ದರೇ ತಪ್ಪದೇ ಇಲ್ಲಿ ತಿಳಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮೈಕ್ರೋ ಕ್ರೆಡಿಟ್, ಮತ್ತು ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಅರ್ಜಿ ಸಲ್ಲಿಸಿ 1.5 ಲಕ್ಷ ದವರೆಗೆ ಸಹಾಯಧನ ಪಡೆಯಬಹುದು.ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿ ನೋಡಿ.ಇದೆ ರೀತಿಯ ಇನ್ನಷ್ಟು ಮಾಹಿತಿಗಾಗಿ ನಮ್ಮ whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ..
2024-25ನೇ ಸಾಲಿನಲ್ಲಿ ಮೈಕ್ರೋ ಕ್ರೆಡಿಟ್ (micro credit ) ಮತ್ತು ಸ್ವಯಂ ಉದ್ಯಮ ನೇರಸಾಲ ಈ ಎರಡು ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, 23 ಅಕ್ಟೋಬರ್ 2024 ದಿಂದ 23 ನವೆಂಬರ್ 2024ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
Busyness loan ಯೋಜನೆವಾರು ಸಬ್ಸಿಡಿ ವಿವರ ಹೀಗಿದೆ.
1 ) ಸ್ವಯಂ ಉದ್ಯೋಗ ನೇರ ಸಾಲ ಯೋಜನೆ.
- ಒಟ್ಟು ಘಟಕ ವೆಚ್ಚ :- 1.0 ಲಕ್ಷ
- ಸಹಾಯಧನ :- 50,000 ರೂಪಾಯಿಗಳು.
- ಸಾಲಕ್ಕೆ ಬಡ್ಡಿ ದರ :- ಬಾಕಿ ಉಳಿದಿರುವ 50,000 ಕ್ಕೆ ಶೇ 4% ರ ಬಡ್ಡಿ ದರದಲ್ಲಿ ಸಾಲ ಕೊಡಲಾಗುತ್ತದೆ.
ವೈಯಕ್ತಿಕವಾಗಿ ಸ್ವಂತ-ಉದ್ಯೋಗವನ್ನು ಮಾಡಲು ಆಸಕ್ತಿ ಇರುವವರು ಈ ಯೋಜನೆ ಅಡಿ ಅರ್ಜಿ ಹಾಕಲು ಅವಕಾಶವಿರುತ್ತದೆ.
2 ) ಮೈಕ್ರೋ ಕ್ರೆಡಿಟ್ ಯೋಜನೆ
- ಒಟ್ಟು ಘಟಕದ ವೆಚ್ಚ :- 2.50 ಲಕ್ಷ
- ಸಹಾಯಧನ :- 1.5 ಲಕ್ಷ
- ಸಾಲ ಬಾಕಿ ಉಳಿದ 1.0 ಲಕ್ಷಕ್ಕೇ ಶೇಕಡ 4% ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ
ಈ ಯೋಜನೆ ಅಡಿ ಪ್ರಯೋಜನನ್ನು ಪಡೆಯಲು ಮಹಿಳಾ ಸ್ವಸಹಾಯ ಸಂಘಗಳಿಗೆ ಅವಕಾಶವಿದ್ದು ಸಂಘದ ಸದಸ್ಯರು ಸ್ವಂತ ಉದ್ಯೋಗವನ್ನು ಮಾಡಲು ಸಾಲ ಮತ್ತು ಸಾಲಕ್ಕೆ ಸಹಾಯಧನವನ್ನು ಪಡೆದುಕೊಳ್ಳಬಹುದು.
Busyness loan ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.
- ಆಧಾರ್ ಕಾರ್ಡ್
- ಸ್ವಉದ್ಯೋಗದ ಯೋಜನಾ ವರದಿ
- ರೇಷನ್ ಕಾರ್ಡ್
- ಅರ್ಜಿ ದಾರದ ಭಾವಚಿತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
Busyness loan ಅರ್ಜಿ ಸಲ್ಲಿಸಲು ಅರ್ಹರು.
- ಅರ್ಜಿದಾರರು ನಮ್ಮ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದವರಾಗಿರಬೇಕು.
- ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- ಅರ್ಜಿದಾರರ ವಯಸ್ಸು 18 ವರ್ಷದಿಂದ 60 ವರ್ಷದ ಒಳಗಿರಬೇಕು.
Busyness loan ಅರ್ಜಿ ಸಲ್ಲಿಸುವ ವಿಧಾನ.
ಎರಡು ವಿಧಾನ ಅನುಸರಿಸಿ ಆನ್ಲೈನ್(online ) ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ ಒಂದು ನೇರವಾಗಿ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರ ಗ್ರಾಮ ಒನ್,ಬೆಂಗಳೂರು ಒನ್,ಕರ್ನಾಟಕ್ ಒನ್, ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುವುದು.
ಈ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ 9482 300 400 ಈ ನಂಬರ್ ಗೆ ಕರೆ ಮಾಡಿ.