Free gas cylinder aplication 2024:- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕದ ಸಮಸ್ತ ಜನರಿಗೆ ತಿಳಿಸುವುದೇನೆಂದರೆ ಕೇಂದ್ರ ಸರಕಾರ ಒಂದು ಹೊಸ ಯೋಜನೆ ಜಾರಿಗೆ ತಂದಿದೆ ಈ ಯೋಜನೆ ಮೂಲಕ ಅರ್ಜಿ ಹಾಕಿದರೆ ನಿಮಗೆ ಒಂದು ಉಚಿತ ಗ್ಯಾಸ್ ಸಿಲೆಂಡರ್ ಜೊತೆಗೆ ಉಚಿತವಾಗಿ ಸ್ಟವ್ ಪಡೆಯಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೆಳಕಂಡಂತೆ ವಿವರಿಸಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ
ಹೌದು ಸ್ನೇಹಿತರೆ ಕೇಂದ್ರ ಸರಕಾರ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಧಾನ ಮಂತ್ರಿ ಯೋಜನೆ ಜಾರಿಗೆ ತಂದಿದೆ ಪ್ರಸ್ತುತ ದಿನದಲ್ಲಿ ಈ ಯೋಜನೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಎಂದು ಹೆಸರು ಕರೆಯಲಾಗಿದೆ ಈ ಯೋಜನೆಯ ಮೂಲಕ ನೀವು ಅರ್ಜಿ ಹಾಕಿದರೆ ಉಚಿತ ಗ್ಯಾಸ್ ಸಿಲೆಂಡರ್ ಹಾಗೂ ಉಚಿತ ಸ್ಟವ್ ಪಡೆಯಬಹುದು ಹೌದು ಸ್ನೇಹಿತರೆ ಪ್ರಥಮ ಮಂತ್ರಿಗಳ ಯೋಜನೆ 2.0 ಗೆ ಹೇಗೆ ಅರ್ಜಿ ಸಲ್ಲಿಸಬೇಕು..? ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳನ್ನು ಮತ್ತು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನೆಯಲ್ಲಿ ನೀಡಿದ್ದೇವೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ
ಇದೇ ರೀತಿ ಸರಕಾರಿ ಖಾಲಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಸರಕಾರಿ ನೌಕರಿಗಳಿಗೆ ಅರ್ಜಿ ಸಲ್ಲಿಸಬೇಕು ಹಾಗೂ ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು? ಇದೇ ರೀತಿ ಸರಕಾರಿ ನೌಕರಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ಪ್ರತಿದಿನ ನಮ್ಮ ಸುದ್ದಿ ವಾಹಿನಿಯಲ್ಲಿ ಪ್ರಕಟಣೆ ಮಾಡಲಾಗುತ್ತದೆ ಎಷ್ಟೇ ಅಲ್ಲದೆ ಸರ್ಕಾರಿ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು..?
ಮತ್ತು ಸರ್ಕಾರಿ ಯೋಜನೆಗಳ ಕುರಿತು ಯಾವ ರೀತಿ ಲಾಭ ಪಡೆಯಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ಪ್ರತಿದಿನವೂ ನಾವು ಈ ನಮ್ಮ ಮಾಹಿತಿ ಕಣಜ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತದೆ ಈ ರೀತಿ ಪ್ರತಿದಿನ ಹೊಸ ಸುದ್ದಿಗಳ ಅಪ್ಡೇಟ್ ತಿಳಿಯಬೇಕೆಂದರೆ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!
ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟುಗಳಾದ WhatsApp & Telegram ಗ್ರೂಪ್ಗಳಿಗೆ ಜಾಯಿನ್ ಆಗಿ ಇದರಿಂದ ನಿಮಗೆ ಪ್ರಚಲಿತ ಘಟನೆಗಳು ಹಾಗೂ ಸರಕಾರಿ ಹುದ್ದೆಗಳು ಮತ್ತು ಸರಕಾರಿ ನೌಕರಿಗಳ ಕುರಿತು ಪ್ರತಿಯೊಂದು ಮಾಹಿತಿಯೂ ಅಪ್ಡೇಟ್ ಮಾಡಲಾಗುತ್ತದೆ ಹಾಗಾಗಿ ಜಾಯಿನ್ ಆಗಲು ಪ್ರಯತ್ನ ಮಾಡಿ
ಇತ್ತೀಚಿನ ದಿನದಲ್ಲಿ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಇಲ್ಲದೆ ಅಡಿಗೆ ಮಾಡಲು ತುಂಬಾ ತೊಂದರೆ ಕೊಡುತ್ತಿದ್ದಾರೆ ಈ ನಿಟ್ಟಿನಲ್ಲಿ ಮಹಿಳೆಯರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಜಾರಿಗೆ ತಂದಿದೆ ಈ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತವಾಗಿ ಒಂದು ಗ್ಯಾಸ್ ಸಿಲಿಂಡರ್ ಹಾಗೂ ಉಚಿತ ಸ್ಟವ್ ನೀಡುವ ಉದ್ದೇಶ ಹೊಂದಿದೆ ಮತ್ತು ಈ ಮೂಲಕ ಮಹಿಳೆಯರಿಗೆ ಸಬ್ಸಿಡಿ ದರದಲ್ಲಿ ಈ ಯೋಜನೆ ಅಡಿಯಲ್ಲಿ ಗ್ಯಾಸ್ ಸಿಲಿಂಡರನ್ನು ನೀಡಲಾಗುತ್ತದೆ
(Free gas cylinder aplication 2024) ಪ್ರಧಾನ ಮಂತ್ರಿ ಉಜ್ವಲ್ ಯೋಜನ 2.0 ..?
ಮೇ 2016 ವರ್ಷದಲ್ಲಿ ನೈಸರ್ಗಿಕ ಅನಿಲ ಸಚಿವಾಲಯ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವಂಚಿತ ಕುಟುಂಬಗಳಿಗೆ ಅಡಿಗೆ ಮಾಡಲು ಪರಿಶುದ್ಧ ಅನಿಲ ಒದಗಿಸುವ ನಿಟ್ಟಿನಲ್ಲಿ ಅಂದರೆ ಅಡಿಗೆ ಮಾಡಲು ನೈಸರ್ಗಿಕ ಅನಿಲ ಅಂದರೆ ಎಲ್ಪಿಜಿ ಗ್ಯಾಸ್ ಅನ್ನು ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆ, ಜಾರಿಗೆ ತರಲಾಯಿತು ಮತ್ತು ಪ್ರಸ್ತುತ ವರ್ಷದಲ್ಲಿ ಅಂದರೆ 2023-2024 ರಲ್ಲಿ ಈ ಯೋಜನೆಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಎಂದು ಮರು ನಾಮಕರಣ ಮಾಡಲಾಯಿತು
ಮೊದಲು ನಗರ ಮತ್ತು ಹಳ್ಳಿ ಪ್ರದೇಶಗಳಲ್ಲಿ ಅಡುಗೆ ಮಾಡಲು ಕಲ್ಲಿದ್ದಲು, ಹಸುವಿನ ಸಗಣಿಯಿಂದ ಮಾಡಲಾದ ಬೆರಣಿ, ಕಟ್ಟಿಗೆಗಳನ್ನು ಬಳಸುತ್ತಿದ್ದರು ಈ ಎಲ್ಲಾ ವಸ್ತುಗಳು ಅಡಿಗೆ ಮಾಡಲು ಬಳಸುವುದರಿಂದ ವಿಪರೀತ ಹೊಗೆ ಬರುತ್ತದೆ ಇದರಿಂದ ಮಹಿಳೆಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಆದ್ದರಿಂದ ಮಹಿಳೆಯರ ಆರೋಗ್ಯವನ್ನು ಸರಿಪಡಿಸುವ ದೃಷ್ಟಿಯಿಂದ ಈ ಯೋಜನೆ ಜಾರಿಗೆ ತರಲಾಯಿತು
ಹೌದು ಸ್ನೇಹಿತರೆ ಮಹಿಳೆಯರ ಆರೋಗ್ಯ ಗುಣಮಟ್ಟವನ್ನು ಸುಧಾರಿಸುವ ಮುಖ್ಯ ಉದ್ದೇಶ ವಾಗಿದೆ, ಈ ಮೂಲಕ ಮಹಿಳೆಯರಲ್ಲಿ ಉಂಟಾಗುವಂತಹ ಶ್ವಾಸಕೋಶ ತೊಂದರೆ ಹಾಗೂ ಅಸ್ತಮಾ ಮತ್ತು ಉಸಿರಾಟ ತೊಂದರೆಗಳಿಗೆ ಸಂಬಂಧಿಸಿದಂತ ಅನೇಕ ರೋಗಗಳನ್ನು ತಡೆಗಟ್ಟುವ ಸಲವಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆ 2016 ಮೇ ತಿಂಗಳಿನಲ್ಲಿ ಜಾರಿಗೆ ತರಲಾಯಿತು
ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಅರ್ಜಿ ಹಾಕಿದಂತ ಫಲಾನುಭವಿಗಳು ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಉಚಿತ ಪಡೆಯಬಹುದು ಈ ಯೋಜನೆಯ ಲಾಭ ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗಡೆ ವಿವರಣೆ ಮಾಡಿದ್ದೇವೆ
(Free gas cylinder aplication 2024) ಪ್ರಧಾನ ಮಂತ್ರಿ ಉಜ್ವಲ್ ಯೋಜನೆ 2.0 ಗೆ ಅರ್ಜಿ ಸಲ್ಲಿಸಲು ಇರಬೇಕಾದಂತ ಅರ್ಹತೆಗಳು..?
- ಹೌದು ಸ್ನೇಹಿತರೆ ನೀವೇನಾದರೂ ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಗೆ ಅರ್ಜಿ ಸಲ್ಲಿಸಬೇಕೆಂದರೆ ಈ ಕೆಳಕಂಡ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 59 ವರ್ಷದ ಒಳಗಿನ ಅವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ
- ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಫಲಾನುಭವಿಗಳು ಈ ಹಿಂದೆ ಯಾವುದೇ (OMC) ಯಿಂದ LPG ಕನೆಕ್ಷನ್ ಪಡೆದಿರಬಾರದು
- sc & st , ಗ್ರಾಮೀಣ ಪ್ರದೇಶ ಅತ್ಯಂತ ಹಿಂದುಳಿದ ವರ್ಗ, ಅಂತ್ಯೋದಯ (AAY) ರೇಷನ್ ಕಾರ್ಡ್ ಹೊಂದಿದ ಎಲ್ಲಾ 18 ವರ್ಷ ಮೇಲ್ಪಟ್ಟ ಮಹಿಳೆಯರು ಈ ಯೋಜನೆಗೆ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ
- ಇದಲ್ಲದೆ ಚಹಾ ಮತ್ತು ಮಾಜಿ ಚಹಾ ತೋಟದಲ್ಲಿ ವಾಸ ಮಾಡುವ ಬುಡಕಟ್ಟುಗಳು ಹಾಗೂ ಕಾಡಿನಲ್ಲಿ ವಾಸ ಮಾಡುವ ಅಥವಾ ಆದಿವಾಸಿಗಳು ಅರ್ಜಿ ಹಾಕಲು ಅವಕಾಶವಿದೆ.
- ದ್ವೀಪಗಳು ಮತ್ತು ನದಿಗಳ ದಂಡೆಯಲ್ಲಿ ವಾಸ ಮಾಡುವ ಕುಟುಂಬಗಳು ಈ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ 2.0 ಗೆ ಅರ್ಜಿ ಅರ್ಜಿ ಸಲ್ಲಿಸಲು ಅವಕಾಶ
ಈ ಮೇಲೆ ಹಿಡಿದಂತ ಎಲ್ಲಾ ವರ್ಗಗಳು ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಅರ್ಜಿ ಸಲ್ಲಿಸಲು ಅವಕಾಶವಿದೆ ಹಾಗಾಗಿ ಪ್ರತಿಯೊಬ್ಬರೂ ಲಾಭ ಪಡೆದುಕೊಳ್ಳಿ ಎಂದು ನಿಮಗೆ ಹೇಳಲು ಇಷ್ಟ ಪಡುತ್ತೇನೆ
(Free gas cylinder aplication 2024) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?
ಹೌದು ಸ್ನೇಹಿತರೆ, ನೀವೇನಾದರೂ ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಗೆ ಅರ್ಜಿ ಸಲ್ಲಿಸಲು ಬಯಸಿದರೆ ಕೆಲವೊಂದು ಕಡ್ಡಾಯವಾಗಿ ದಾಖಲಾತಿಗಳನ್ನು ನೀಡಬೇಕಾಗುತ್ತದೆ ಅದರ ಸಂಪೂರ್ಣ ಮಾಹಿತಿಯನ್ನು ನಾನು ಈ ಕೆಳಗಡೆ ನೀಡಿದ್ದೇನೆ
ಆಧಾರ್ ಕಾರ್ಡ್:- ಹೌದು ಸ್ನೇಹಿತರೆ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುತ್ತಾರೆ ಅರ್ಜಿ ಸಲ್ಲಿಸುವಂತಹ ಮಹಿಳೆಯ ಆಧಾರ್ ಕಾರ್ಡ್ ಜೆರಾಕ್ಸ್ ನೀಡಬೇಕಾಗುತ್ತದೆ ಮತ್ತು ಈ ಆಧಾರ್ ಕಾರ್ಡಿಗೆ ಕಡ್ಡಾಯವಾಗಿ ಲಿಂಕ್ ಇರುವಂತಹ ಮೊಬೈಲ್ ನಂಬರ್ ಹಾಗೂ ಈ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿರಬೇಕಾಗುತ್ತದೆ
- ಅಂದರೆ ನಿಮ್ಮ ಆಧಾರ್ ಕಾರ್ಡ್ ತಿಳಿದು 10 ವರ್ಷಗಳ ಕಾಲ ಯಾವುದೇ ರೀತಿ ಅಪ್ಡೇಟ್ ಮಾಡಿಲ್ಲ ಎಂದರೆ ಅಂತ ಆಧಾರ್ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಹಾಗಾಗಿ ನೀವು 10 ವರ್ಷಗಳ ಕಾಲ ಅಪ್ಡೇಟ್ ಮಾಡಿಲ್ಲ ಎಂದರೆ ನಿಮ್ಮ ಹತ್ತಿರದ ಸೆಂಟರ್ ಗಳಿಗೆ ಹೋಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿ ಮತ್ತು ಅಪ್ಡೇಟ್ ಮಾಡಿದಂತ ಜೆರಾಕ್ಸ್ ನೀಡಬೇಕು
ರೇಷನ್ ಕಾರ್ಡ್:- ಹೌದು ಸ್ನೇಹಿತರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ರೇಷನ್ ಕಾರ್ಡ್ ನೀಡಬೇಕಾಗುತ್ತದೆ ಕಾರಣ ಏನಪ್ಪಾ ಅಂದರೆ ಬಡತನ ರೇಖೆಗಿಂತ ಕೆಳಗಿರುವ ರಿಗೆ ಈ ಯೋಜನೆಯಲ್ಲಿ ಉಚಿತ ಗ್ಯಾಸ್ ಮತ್ತು ಉಚಿತ ನೀಡಲಾಗುತ್ತದೆ ಹಾಗಾಗಿ ಕಡ್ಡಾಯವಾಗಿ ರೇಷನ್ ಕಾರ್ಡ್ ನೀಡಬೇಕಾಗುತ್ತದೆ
- BPL ಬಿಪಿಎಲ್ ರೇಷನ್ ಕಾರ್ಡ್ ಕುಟುಂಬದಾರರು ಹಾಗೂ ಅಂತೋದಯ ರೇಷನ್ ಕಾರ್ಡ್ ಹೊಂದಿರುವ ಕುಟುಂಬದವರು ಪ್ರಧಾನ ಮಂತ್ರಿ 2.0 ಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಇಂಥವರು ಕಡ್ಡಾಯವಾಗಿ ತಮ್ಮ ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ನೀಡಬೇಕಾಗುತ್ತದೆ
ಬ್ಯಾಂಕ್ ಖಾತೆ:- ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಲಾಭ ಪಡೆಯಬೇಕಾದರೆ ಅಥವಾ ಸಬ್ಸಿಡಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಬೇಕೆಂದರೆ ನೀವು ಕಡ್ಡಾಯವಾಗಿ ಒಂದು ಬ್ಯಾಂಕ್ ಖಾತೆಯ ಜೆರಾಕ್ಸ್ ಅನ್ನು ನೀಡಬೇಕಾಗುತ್ತದೆ ಮತ್ತು ಈ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಕೆವೈಸಿ ಮಾಡಿಸಿರಬೇಕಾಗುತ್ತದೆ
- ಮತ್ತು ಪ್ರಧಾನ ಮಂತ್ರಿ ಉಜ್ವಲ್ ಯೋಜನೆ 2.0 ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮಾ ಆಗಬೇಕಾದರೆ ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಹಾಗೂ NPCI ಮ್ಯಾಪಿಂಗ್ ಮಾಡಿಸುವುದು ಕೂಡ ಕಡ್ಡಾಯವಾಗಿದೆ
ವಿಳಾಸದ ಪುರಾವೆ:- ಹೌದು ಸ್ನೇಹಿತರೆ ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಗೆ ಅರ್ಜಿ ಸಲ್ಲಿಸಲು ನೀವು ವಾಸ ಮಾಡುವಂತ ಸ್ಥಳದ ಅಥವಾ ನೀವು ವಾಸ ಮಾಡುವಂಥ ಸ್ಥಳದ ಕುರಿತು ದಾಖಲೆ ಹೊಂದಿರುವಂತ ಯಾವುದಾದರೂ ಒಂದು ದಾಖಲಾತಿಯನ್ನು ನೀಡಬೇಕಾಗುತ್ತದೆ
- ಉದಾಹರಣೆ:- ವೋಟರ್ ಐಡಿ, ಪಾನ್ ಕಾರ್ಡ್, ವಾಸ ಸ್ಥಳ ಪ್ರಮಾಣ ಪತ್ರ, ಅಥವಾ ನೀವು ಯಾವ ಸ್ಥಳದಲ್ಲಿ ವಾಸ ಮಾಡುತ್ತಿರಿ ಎಂಬ ಯಾವುದಾದರೂ ಒಂದು ಗುರುತಿನ ಆಧಾರವನ್ನು ನೀಡಬೇಕಾಗುತ್ತದೆ
ಕೆವೈಸಿ:- ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಅರ್ಜಿಯಲ್ಲಿ ತಮ್ಮ ಕೆವೈಸಿ ಡಿಟೇಲ್ಸ್ ಹಾಗೂ ತಮ್ಮ ಸಿಗ್ನೇಚರ್ ಅಥವಾ ಹೆಬ್ಬಳ್ಳಿನ ಗುರುತನ್ನು ಅರ್ಜಿ ಸಲ್ಲಿಸುವ ಫಾರ್ಮನಲ್ಲಿ ಸರಿಯಾಗಿ ಮಾಡಬೇಕಾಗುತ್ತದೆ
ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಕೆವೈಸಿ ಡಿಟೇಲ್ಸ್ ನೀಡುವಂತ ರೇಷನ್ ಕಾರ್ಡ್ ಜೆರಾಕ್ಸ್ ಹಾಗೂ ಇತರ ಯಾವುದೇ ಡಾಕ್ಯುಮೆಂಟ್ಸ್ ಇದ್ದರೂ ಕೂಡ ಅರ್ಜಿ ಸಲ್ಲಿಸಲು ನೀಡಬೇಕಾಗುತ್ತದೆ
ಹೌದು ಸ್ನೇಹಿತರೆ ಈ ಮೇಲೆ ನೀಡಿದ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರ ಇದಾವೆ ಇಲ್ಲ ಎಂದು ಖಚಿತಪಡಿಸಿಕೊಳ್ಳಿ ನಂತರ ನೀವು ಈ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಬಹುದು
(Free gas cylinder aplication 2024) ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 2.0 ಅರ್ಜಿ ಹಾಕುವುದು ಹೇಗೆ..?
ಈ ಯೋಜನೆಯ ಅರ್ಜಿ ಹಾಕಲು ನೀವು ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಳ್ಳಿ ನಂತರ ಈ ಯೋಜನೆಗೆ ಅರ್ಜಿ ಹಾಕಲು ನಿಮಗೆ ಎರಡು ರೀತಿಯಲ್ಲಿ ಅರ್ಜಿ ಹಾಕಲು ಅವಕಾಶವಿರುತ್ತದೆ ಮೊದಲನೇದಾಗಿ ಆನ್ಲೈನ್ ಮೂಲಕ ಅರ್ಜಿ ಹಾಕಬಹುದು ಮತ್ತು ಎರಡನೆಯದಾಗಿ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳ ಮೂಲಕ ಅರ್ಜಿ ಹಾಕಲು ಅವಕಾಶವಿರುತ್ತದೆ
ಹಾಗಾಗಿ ಮೊದಲನೇದಾಗಿ ಆನ್ಲೈನ್ ಮೂಲಕ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗಡೆ ತಿಳಿಸಿದ್ದೇವೆ ಆನ್ಲೈನ್ ಮೂಲಕ ಅರ್ಜಿ ಹಾಕಲು ನಾವು ಕೆಳಗಡೆ ಒಂದು ಲಿಂಕ್ ನೀಡಿದ್ದೇವೆ ಅದರ ಮೂಲಕ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ
- ಮೇಲೆ ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಪುಟ ಓಪನ್ ಆಗುತ್ತೆ
- ನಂತರ ನಿಮಗೆ ಅಲ್ಲಿ ಅರ್ಜಿ ಸಲ್ಲಿಸಲು ಕ್ಲಿಕ್ ಹಿಯರ್ ಅಂತ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ನೀವು ಯಾವ ಕಂಪನಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸಲು ಇಷ್ಟಪಡುತ್ತೀರೋ ಆ ಕಂಪನಿಯನ್ನು ಅಥವಾ ನಿಮ್ಮ ಹತ್ತಿರದ ಎಲ್ ಪಿ ಜಿ ವಿತರಣೆ ಮಾಡುವ ಏಜೆನ್ಸಿಗಳನ್ನು ಆಯ್ಕೆ ಮಾಡಿಕೊಳ್ಳಿ
ಉದಾಹರಣೆ:- HP, Bharat Gas, indane
- ಮೇಲೆ ನೀಡಿದ ಯಾವುದಾದ್ರೂ ಒಂದು ಏಜೆನ್ಸಿಯನ್ನು ಆಯ್ಕೆ ಮಾಡಿಕೊಂಡ
- ನಂತರ ನಿಮಗೆ ಅಲ್ಲಿ ಕೆಲವೊಂದು ದಾಖಲಾತಿಗಳನ್ನು ಅಪ್ಲೋಡ್ ಮಾಡಲು ಕೇಳುತ್ತದೆ ಆ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ನೋಡಿಕೊಂಡು ಅಪ್ಲೋಡ್ ಮಾಡಿ
- ನಂತರ ನಿಮ್ಮ ಅರ್ಜಿ ಸಕ್ಸಸ್ ಫುಲ್ ಎಂದು ಬರುತ್ತದೆ ನಂತರ ನಿಮಗೆ ಒಂದು ತಿಂಗಳ ಒಳಗಾಗಿ ನೀವು ಹಾಕಿದಂತ ಏಜೆನ್ಸಿ ಕಡೆಯಿಂದ ಕರೆ ಬರುತ್ತದೆ ನಂತರ ನೀವು ಏಜೆನ್ಸಿಗೆ ಭೇಟಿ ನೀಡಿ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ಪಡೆಯಬಹುದು
ಈ ರೀತಿ ಆನ್ಲೈನ್ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಉಚಿತ ಸ್ಟವ್ ಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು
ಎರಡನೇ ರೀತಿ ಅರ್ಜಿ ಸಲ್ಲಿಸಲು ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಿ
- ಹೌದು ಸ್ನೇಹಿತರೆ ನೀವು ಆಫ್ಲೈನ್ ಮೂಲಕ ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳ ಮೂಲಕ ಅಥವಾ ನೀವು ನಿಮ್ಮ ಹತ್ತಿರದ ಏಜೆನ್ಸಿಗಳಿಗೆ ಭೇಟಿ ನೀಡಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗೆ ಅರ್ಜಿ ಸಲ್ಲಿಸಬಹುದು
- ಕೆಳಗಡೆ ನೀಡಲಾದ ಆನ್ಲೈನ್ ಸೆಂಟರ್ಗಳ ಮೂಲಕ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿ ಸಲ್ಲಿಸಬಹುದು
- ಗ್ರಾಮ ಒನ್
- ಕರ್ನಾಟಕ ಒನ್
- ಬೆಂಗಳೂರು ಒನ್
- CSC ಕೇಂದ್ರ
- ಇತರ ಆನ್ಲೈನ್ ಸೆಂಟರ್ ಗಳು
ಹೌದು ಸ್ನೇಹಿತರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಮೇಲೆ ನೀಡಿದ ಆನ್ಲೈನ್ ಸೆಂಟರ್ಗಳ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಎಲ್ ಪಿ ಜಿ ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
ಈ ಲೇಖನೆಯ ಮೂಲಕ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಸಿಲಿಂಡರ್ ಆಗುವ ಸ್ಟವ್ ಪಡೆಯಬಹುದೆಂಬ ಸಂಪೂರ್ಣ ಮಾಹಿತಿ ನಿಮಗೆ ದೊರೆತಿದೆ ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನ ಆದಷ್ಟು ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ
ವಿಶೇಷ ಸೂಚನೆ:- ಸ್ನೇಹಿತರೆ ಈ ನಮ್ಮ ಮಾಧ್ಯಮದಲ್ಲಿ ಪ್ರಕಟಣೆ ಆಗುವಂತ ಪ್ರತಿಯೊಂದು ಮಾಹಿತಿಯೂ ಖಚಿತ ಮತ್ತು ನಿಖರ ಮಾಹಿತಿಯಾಗಿರುತ್ತೆ ಎಂದು ನಿಮಗೆ ತಿಳಿದಿರಲಿ ಹಾಗೂ ಈ ಮಾಧ್ಯಮದಲ್ಲಿ ಯಾವುದೇ ಸುಳ್ಳು ಸುದ್ದಿಗಳನ್ನು ಪ್ರಕಟಣೆ ಮಾಡಲಾಗುವುದಿಲ್ಲ ಎಂದು ನಿಮಗೆ ತಿಳಿದಿರಲಿ