Ration card apply online

Ration card apply online | ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವುದು ಹೇಗೆ ? ಬೇಕಾಗುವಂತ ದಾಖಲಾತಿಗಳು ಏನು ?

Ration card apply online:- ನಮಸ್ಕಾರ ಸ್ನೇಹಿತರೆ ಈ ಲೇಖನ ಮೂಲಕ ಕರ್ನಾಟಕದ ಸಮಸ್ತ ಜನರಿಗೆ ಏನೆಂದರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕುವುದು ಹೇಗೆ ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಯಾವಾಗ ಬಿಡುತ್ತಾರೆ ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬೇಕಾಗುವಂತಹ ದಾಖಲಾತಿಗಳನ್ನು ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಬಹುದೇ ಹಾಗಾದರೆ ತಿದ್ದುಪಡಿಯಲ್ಲಿ ಏನೇನೋ ಮಾಡಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ನೀಡಿದ್ದೇವೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ

10ನೇ ತರಗತಿ ಫಲಿತಾಂಶ ಈ ದಿನಾಂಕದಂದು ಪ್ರಕಟಣೆ ಇಲ್ಲಿದೆ ಸಂಪೂರ್ಣ ಮಾಹಿತಿ ಈ ರೀತಿ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿ

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ರೇಷನ್ ಕಾರ್ಡ್ ಇವತ್ತು ಕರ್ನಾಟಕದಲ್ಲಿ ಮುಖ್ಯ ಆಧಾರವಾಗಿ ಬಳಸುತ್ತಲಾಗುತ್ತಿದೆ ಹಾಗೆ ಒಂದು ರೇಷನ್ ಕಾರ್ಡ್ ನಿಮ್ಮಲ್ಲಿ ಇದ್ದರೆ ತಿಂಗಳಿಗೆ ಐದರಿಂದ ಎಂಟು ಸಾವಿರದ ತನಕ ಲಾಭ ಪಡೆಯಬಹುದು ಎಂದು ಹೇಳಬಹುದು ಹೌದು ಸ್ನೇಹಿತರೆ, ಕರ್ನಾಟಕದಲ್ಲಿ (Ration card apply online) ಒಂದು ರೇಷನ್ ಕಾರ್ಡ್ ಇದ್ದರೆ ಐದರಿಂದ ಎಂಟು ಸಾವಿರಗಳ ತನಕ ಲಾಭ ಪಡೆಯಬಹುದಾಗಿದೆ ತುಂಬಾ ಜನರು ಎರಡು ಮೂರು ವರ್ಷಗಳಿಂದ ಕಾಯುತ್ತಿದ್ದಾರೆ ಅಂತವರಿಗೆ ಈ ಲೇಖನಿಯಲ್ಲಿ ಗುಡ್ ನ್ಯೂಸ್ ಇದೆ ಎಂದು ಹೇಳಬಹುದು

ಅನ್ನಭಾಗ್ಯ ಯೋಜನೆಯ ಈ ತಿಂಗಳ ಅಕ್ಕಿ  ಹಣ ಬಿಡುಗಡೆಯಾಗಿದೆ ನಿಮಗೆ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

ಇದೇ ರೀತಿ ಹೊಸ ಸುದ್ದಿಗಳಿಗಾಗಿ ಯಾವ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಮಾಹಿತಿಗಾಗಿ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತ ಉದ್ಯೋಗಗಳ ಮಾಹಿತಿಗಾಗಿ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಬೇಕಾದರೆ ನಮ್ಮ ಅಧಿಕೃತ ವೆಬ್ಸೈಟ್ ಮೇನ್ ಪೇಜಿಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp  & Telegram ಗ್ರೂಪ್ ಗಳಿಗೆ ಜೈನ್ ಆಗಬಹುದು ಇದರಿಂದ ಪ್ರಚಲಿತ ಘಟನೆಗಳ ಬಗ್ಗೆ ಹಾಗೂ ಉದ್ಯೋಗಗಳ ಸಂಬಂಧಿಸಿದಂತೆ ಮಾಹಿತಿ ಬಗ್ಗೆ ಬೇಗ ಅಪ್ಡೇಟ್ ನೀಡಲಾಗುತ್ತದೆ ಹಾಗಾಗಿ ಪ್ರಯತ್ನ ಮಾಡಿ

ಕೇವಲ 500 ರೂಪಾಯಿಗೆ ಸಿಗಲಿದೆ ಉಚಿತ ಎಲ್ಪಿಜಿ ಗ್ಯಾಸ್ ಸಿಲೆಂಡರ್ | ಈ ಕೆಲಸ ಮಾಡಿ ನಿಮಗೂ ಕೂಡ 500 ರೂಪಾಯಿಗೆ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಸಿಗುತ್ತದೆ

ನಾವು ಈ ಲೇಖನಿಯಲ್ಲಿ ಹೊಸ ರೇಷನ್ ಕಡೆಗೆ ಅರ್ಜಿ ಹಾಕುವುದು ಹೇಗೆ ಹಾಗೂ ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರನ್ನು ಯಾವ ರೀತಿ ಸೇರ್ಪಡೆ ಮಾಡಿಕೊಳ್ಳಬೇಕು ಹಾಗೂ ರೇಷನ್ ಕಾರ್ಡ್ ನಲ್ಲಿ ಎಷ್ಟು ವಿಧಗಳಿವೆ ಮತ್ತು ರೇಷನ್ ಕಾರ್ಡ್ ಮೂಲಕ ಆಗುವಂತ ಉಪಯೋಗಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನನ್ನು ಗಮನವಿಟ್ಟು ಓದಿಕೊಳ್ಳಿ

 

(Ration card apply online) ರೇಷನ್ ಕಾರ್ಡ್ ಯಾವಾಗ ಜಾರಿಗೆ ಬಂದಿದೆ ?

ಹೌದು ಸ್ನೇಹಿತರೆ ತುಂಬಾ ಜನರಿಗೆ ಒಂದು ಪ್ರಶ್ನೆ ಕಾಡುತ್ತಿರುತ್ತೆ ಏನಪ್ಪಾ ಅಂದರೆ ರೇಷನ್ ಕಾರ್ಡ್ ಯಾವಾಗ ಜಾರಿಗೆ ಬಂದಿದೆ ಅಂತವರಿಗೆ ಈ ಲೇಖನ ಬಗ್ಗೆ ಮಾಹಿತಿ ನೀಡಲಾಗುತ್ತದೆ ಹೌದು ಸ್ನೇಹಿತರೆ ರೇಷನ್ ಕಾರ್ಡನ್ನು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷರು ಈ ರೇಷನ್ ಕಾರ್ಡ್ ಪದ್ಧತಿಯನ್ನು ಪರಿಚಯ ಮಾಡಿದರು

ಹೌದು ಸ್ನೇಹಿತರೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷರ ಸೈನಿಕರಿಗೆ ರೇಷನ್ ಪದ್ಧತಿ ಮೂಲಕ ಅವರಿಗೆ ದವಸ ಧಾನ್ಯಗಳನ್ನು ವಿತರಣೆ ಮಾಡಲು ಈ ಪದ್ಧತಿಯನ್ನು ಬ್ರಿಟಿಷರು ಜಾರಿಗೆ ತಂದಿದ್ದರು ಈ ಪದ್ಧತಿಯ ಮೂಲಕ ಸೈನಿಕರಿಗೆ ಕಡಿಮೆ ದರದ ದವಸ ಧಾನ್ಯಗಳನ್ನು ವಿತರಣೆ ಮಾಡುವಂತಹ ಒಂದು ಪದ್ಧತಿಯನ್ನು ಪಡಿತರ ಪದ್ಧತಿ ಎಂದು ಜಾರಿಗೆಯನ್ನು ತರಲಾಯಿತು

WhatsApp Group Join Now
Telegram Group Join Now       
Ration card apply online
Ration card apply online

 

ಭಾರತಕ್ಕೆ ಸ್ವತಂತ್ರ ಬಂದ ನಂತರ ಅಂದರೆ 1947ರಲ್ಲಿ ಈ ಪದ್ಧತಿಯನ್ನು ಜಾರಿಗೆ ತರಲು ನಮ್ಮ ಭಾರತ ಸರಕಾರ ನಿರ್ಧಾರ ಮಾಡಿದ್ದು ಅದೇ ರೀತಿ 1950 ರಲ್ಲಿ ಈ ಪದ್ಧತಿಯನ್ನು ನಮ್ಮ ಭಾರತದಲ್ಲಿ ಜಾರಿಗೆ ತರಲಾಯಿತು ಹೌದು ಸ್ನೇಹಿತರೆ 1950 ರಲ್ಲಿ ಪಡಿತರ ಚೀಟಿ ಮೂಲಕ ತವಸ ಧಾನ್ಯಗಳನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವಿತರಣೆ ಮಾಡುವ ಪದ್ದತಿಯನ್ನು ಭಾರತ ಸರ್ಕಾರ ಜಾರಿಗೆ ತಂದಿದೆ

1947ರಲ್ಲಿ ಭಾರತ ದೇಶ ಸ್ವತಂತ್ರವಾದ ನಂತರ ಭಾರತದಲ್ಲಿ ತೀವ್ರ ಬಡತನ ಹಾಗೂ ಹಸಿವಿನಿಂದ ಜನರು ಸಾವನ್ನಪ್ಪುತ್ತಿದ್ದರು ಈ ಸಮಸ್ಯೆಯನ್ನು ಹೋಗಲಾಡಿಸಲು ಬಡತನ ರೇಖೆಗಿಂತ ಕೆಳಗಿರುವವರಿಗೆ ಹಾಗೂ ಹಸಿವಿನಿಂದ ಬಳಲುತ್ತಿರುವವರಿಗೆ ಉತ್ತಮ ಮಟ್ಟದ ದವಸ ಧಾನ್ಯಗಳು ಹಾಗೂ ಅಕ್ಕಿ ವಿತರಣೆ ಮಾಡಲು ಈ ರೇಷನ್ ಪದ್ಧತಿ ಜಾರಿಗೆ ತರಲಾಯಿತು

 

(Ration card apply online) ರೇಷನ್ ಕಾರ್ಡ್ ನಲ್ಲಿ ಎಷ್ಟು ವಿಧಗಳು ?

ಹೌದು ಸ್ನೇಹಿತರೆ ರೇಷನ್ ಕಾರ್ಡ್ ನಲ್ಲಿ ಮೂರು ರೀತಿಯ ರೇಷನ್ ಕಾರ್ಡ್ ಗಳನ್ನು ಈಗ ನಮ್ಮ ಕರ್ನಾಟಕದಲ್ಲಿ ಚಾಲ್ತಿಯಲ್ಲಿ ಇವೆ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ

WhatsApp Group Join Now
Telegram Group Join Now       
  • BPL ರೇಷನ್ ಕಾರ್ಡ್
  • AAY ರೇಷನ್ ಕಾರ್ಡ್
  • APL ರೇಷನ್ ಕಾರ್ಡ್

 

BPL ರೇಷನ್ ಕಾರ್ಡ್ :- ಬಿಪಿಎಲ್ ರೇಷನ್ ಕಾರ್ಡನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುತ್ತದೆ ಈ ರೇಷನ್ ಕಾರ್ಡ್ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಲಾಭ ಪಡೆಯಬಹುದಾಗಿದೆ ಹೌದು ಸ್ನೇಹಿತರೆ ಒಂದು ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಕರ್ನಾಟಕದಲ್ಲಿ ಸುಮಾರು ತಿಂಗಳಿಗೆ 5 ರಿಂದ 8000 ತನಕ ಹಣ ಪಡೆಯಬಹುದು

ಈ ಬಿಪಿಎಲ್ ರೇಷನ್ ಕಾರ್ಡನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ಅಂದರೆ ಈ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಕುಟುಂಬದ ಆದಾಯ ವರ್ಷಕ್ಕೆ ಒಂದು ಲಕ್ಷಕ್ಕಿಂತ ಕೆಳಗಡೆ ಇರಬೇಕು ಅಂದರೆ ಮಾತ್ರ ಈ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅಂತ ಕುಟುಂಬಗಳು ಅರ್ಹತೆ ಹೊಂದಿರುತ್ತವೆ ಎಂದು ಹೇಳಬಹುದು

ಬಿಪಿಎಲ್ ರೇಷನ್ ಕಾರ್ಡ್ ಬಂದಿದಂತ ಕುಟುಂಬಗಳಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಲ 10 ಕೆಜಿ ಅಕ್ಕಿಯನ್ನು ನೀಡುತ್ತವೆ ಎಂಬ ಭರವಸೆ ನೀಡಲಾಗಿತ್ತು ಅದೇ ರೀತಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 10 ಕೆಜಿ ಅಕ್ಕಿ ನೀಡುತ್ತೇವೆ ಎಂಬ ಭರವಸೆ ಕೊಟ್ಟಿದೆ

ಅಂದರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಕುಟುಂಬದಲ್ಲಿ 5 ಜನ ಇದ್ದಾರೆ ಅಂದುಕೊಳ್ಳೋಣ ಒಬ್ಬರಿಗೆ 10 ಕೆಜಿ ಯಂತೆ ಐದು ಜನಕ್ಕೆ 50 ಕೆಜಿ ಅಕ್ಕಿ ನೀಡಬೇಕಾಗುತ್ತದೆ ಪ್ರಸ್ತುತ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ನೀಡುವಂತ ಐದು ಕೆಜಿ ಅಕ್ಕಿ ಮಾತ್ರ ದೊರೆಯುತ್ತಿದೆ ಕಾರಣ ಅಕ್ಕಿ ಅಭಾವದಿಂದ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಯನ್ನು ಮಾತ್ರ ನೀಡಲಾಗುತ್ತಿದ್ದು ಉಳಿದ ಐದು ಕೆಜಿ ಅಕ್ಕಿ ಬದಲು ಕರ್ನಾಟಕ ರಾಜ್ಯ ಸರ್ಕಾರ ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತಿದೆ

ಉದಾಹರಣೆ:- ನಮ್ಮ ಕರ್ನಾಟಕದಲ್ಲಿ ಪ್ರಸ್ತುತ 5 ಕೆ.ಜಿ ಅಕ್ಕಿಗೆ ಕರ್ನಾಟಕ ರಾಜ್ಯ ಸರ್ಕಾರ ನಿಗದಿ ಮಾಡಿದ ಪ್ರಕಾರ ಒಂದು ಕೆಜಿ ಅಕ್ಕಿಗೆ ₹34 ರೂಪಾಯಿ ಅಂತೆ 5 ಕೆಜಿಗೆ 170 ರೂಪಾಯಿ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ

ಅಂದರೆ ಒಂದು ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಐದು ಜನ ಸದಸ್ಯರು ಇದ್ದಾರೆ ಅಂದುಕೊಳ್ಳೋಣ ಒಬ್ಬ ಸದಸ್ಯರಿಗೆ 170 ರೂಪಾಯಿಯಂತೆ ಐದು ಜನರಿಗೆ 850 ರೂಪಾಯಿ ಹಣವನ್ನು ರೇಷನ್ ಕಾರ್ಡ್ ನಲ್ಲಿರುವಂತ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ

ನಮ್ಮ ಕರ್ನಾಟಕದಲ್ಲಿ ಇಲ್ಲಿವರೆಗೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸುಮಾರು 10 ಕಂತಿನ ಅಕ್ಕಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಬಹುದು

AYY ರೇಷನ್ ಕಾರ್ಡ್:- ಈ ರೇಷನ್ ಕಾರ್ಡನ್ನು ಅತ್ಯಂತ ಕಡು ಬಡತನದ ಕುಟುಂಬಗಳಿಗೆ ನೀಡಲಾಗುತ್ತದೆ ಹೌದು ಸ್ನೇಹಿತರೆ ಭಾರತದಲ್ಲಿ ವಾಸ ಮಾಡುವಂತಹ ಅತ್ಯಂತ ಕಡುಬಡತನ ಕುಟುಂಬಗಳಿಗೆ ಈ ಅಂಥೋದಯ (Ration card apply online) ರೇಷನ್ ಕಾರ್ಡ್ ಅನ್ನು ನೀಡಲಾಗುತ್ತದೆ

ಅಂದರೆ ಭಾರತದಲ್ಲಿ ವಾಸ ಮಾಡುವಂಥ ಯಾವುದೇ ಕುಟುಂಬವಾಗಲಿ ಅಥವಾ ಕರ್ನಾಟಕದಲ್ಲಿ ವಾಸ ಮಾಡುವಂತೆ ಯಾವುದೇ ಕುಟುಂಬವಾಗಲಿ ತನ್ನ ವಾರ್ಷಿಕ ಆದಾಯ 36,000 ಗಿಂತ ಕಡಿಮೆ ಇದ್ದರೆ ಅಂತ ಕುಟುಂಬಗಳು ಈ ಅಂತೋದಯ (Ration card apply online) ರೇಷನ್ ಕಾರ್ಡನ್ನು ಪಡೆಯಬಹುದು ಎಂದು ಹೇಳಲಾಗಿದೆ

(AYY Ration Card) ಈ ಕಾರ್ಡಿನಿಂದ ಆಗುವ ಉಪಯೋಗಗಳು ?

  • ಹೌದು ಸ್ನೇಹಿತರೆ ಅಂತ್ಯೋದಯ ಕಾರ್ಡ್ ಹೊಂದಿದ ಕುಟುಂಬಗಳನ್ನು ಅತ್ಯಂತ ಕಡು ಬಡುವರೆಂದು ಗುರುತಿಸಲ್ಪಡುತ್ತದೆ ಹಾಗೂ ಇಂಥ ಕುಟುಂಬಗಳಿಗೆ ಹೆಚ್ಚಿನ ಸೌಲಭ್ಯವನ್ನು ಸರ್ಕಾರ ಕಡೆಯಿಂದ ದೊರೆಯುತ್ತದೆ
  • ಇಂಥ ಕಾರ್ಡ್ ಹೊಂದಿದ ಕುಟುಂಬಗಳಿಗೆ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರು 60 ವರ್ಷಕ್ಕಿಂತ ಮೇಲ್ಪಟ್ಟರೆ (ವೃದ್ಧರು ಸದಸ್ಯರು ಮಾತ್ರ ಇದ್ದರೆ) ಅಂತ ಕುಟುಂಬಗಳಿಗೆ ರೇಷನ್ ಅನ್ನು ಮನೆಗಳಿಗೆ ನೇರವಾಗಿ ವಿತರಣೆ ಮಾಡಲಾಗುತ್ತದೆ
  • ಅಂತೋದಯ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಿಗೆ ಕೇಂದ್ರ ಸರ್ಕಾರ ಕಡೆಯಿಂದ 35 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ( ಈ ಕಾಡಿನಲ್ಲಿ ಒಬ್ಬ ಸದಸ್ಯರು ಇದ್ದರೂ ಕೂಡ 35 ಕೆಜಿ ದೊರೆಯುತ್ತದೆ, 10 ಜನ ಸದಸ್ಯರಿದ್ದರು ಕೂಡ 35 ಕೆಜಿ ಅಕ್ಕಿ ಮಾತ್ರ ದೊರೆಯುತ್ತದೆ)
  • ಕರ್ನಾಟಕದಲ್ಲಿ ಈ ಅಂತೋದಯ ರೇಷನ್ ಕಾರ್ಡ್ ಕುಟುಂಬಗಳಿಗೆ ಸದ್ಯದ ಮಟ್ಟಿಗೆ ಕೇಂದ್ರ ಸರ್ಕಾರ ಕಡೆಯಿಂದ 35 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದ್ದು ಹಾಗೂ ರಾಜ್ಯ ಸರ್ಕಾರ ಕಡೆಯಿಂದ ಈ ಕಾರ್ಡಿನಲ್ಲಿ ಎರಡಕ್ಕಿಂತ ಹೆಚ್ಚಿನ ಜನರು ಇದ್ದರೆ ಮಾತ್ರ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ

 

APL ರೇಷನ್ ಕಾರ್ಡ್:- ಹೌದು ಸ್ನೇಹಿತರೇ ಎಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಿಗೆ ಸರ್ಕಾರ ಕಡೆಯಿಂದ ಯಾವುದೇ ಉಚಿತ ದವಸ ಧಾನ್ಯಗಳು ಅಥವಾ ಪಡಿತರ ನೀಡಲು ಆಗುವುದಿಲ್ಲ ಏಕೆಂದರೆ ಈ ಕಾಡನ್ನು ಶ್ರೀಮಂತರಿಗೆ ಮಾತ್ರ ನೀಡಲಾಗುತ್ತದೆ ಮತ್ತು ಈ ಕಾರ್ಡಿನಿಂದ ಉಪಯೋಗ ಏನು ಎಂದು ನೀವು ಕೇಳಬಹುದು ಈ ಕಾರ್ಡ್ ಹೊಂದುವುದರಿಂದ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಕೆಲವು ಉಪಯೋಗ ಪಡೆಯಬಹುದು

 

(Ration card apply online) ರೇಷನ್ ಕಾರ್ಡ್ ಪಡೆಯಲು ಇರಬೇಕಾದ ಅರ್ಹತೆಗಳು ?

ಹೌದು ಸ್ನೇಹಿತರೆ, ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಪಡೆಯಲು ಕೆಲವೊಂದು ಅರ್ಹತೆಗಳನ್ನು ನಿಗದಿ ಮಾಡಲಾಗಿದ್ದು ಅವುಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ

 

  • ಕರ್ನಾಟಕದಲ್ಲಿ ನೀವು ಬಿಪಿಎಲ್ ಅಥವಾ ಅಂತೋದಯ ರೇಷನ್ ಕಾರ್ಡ್ ಪಡೆಯಬೇಕೆಂದರೆ ಮೊದಲು ನೀವು ಕರ್ನಾಟಕದ ನಿವಾಸಿ ಆಗಿರಬೇಕಾಗುತ್ತದೆ
  • ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ನಿಮ್ಮ ವಾರ್ಷಿಕ ಆದಾಯ ಒಂದು ಲಕ್ಷಕ್ಕಿಂತ ಕೆಳಗಡೆ ಇರಬೇಕಾಗುತ್ತದೆ
  • ಅಂತೋದಯ ರೇಷನ್ ಕಾರ್ಡ್ ಪಡೆಯಬೇಕಾದರೆ ನಿಮ್ಮ ವಾರ್ಷಿಕ ಆದಾಯ 36,000 ಗಿಂತ ಕಡಿಮೆ ಇರಬೇಕಾಗುತ್ತದೆ
  • ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಪಡೆಯುವಂತ ಕುಟುಂಬಗಳು ಒಂದು ಹೆಕ್ಟರ್ ದಿಂತ ಕಡಿಮೆ ಭೂಮಿ ಹೊಂದಿರಬೇಕಾಗುತ್ತದೆ
  • ನಗರ ಪ್ರದೇಶದಲ್ಲಿ ವಾಸ ಮಾಡುವಂಥ ಕುಟುಂಬಗಳು ಈ ರೇಷನ್ ಕಾರ್ಡನ್ನು ಪಡೆಯಬೇಕಾದರೆ 100 ಚದರ್ ಮೀಟರ್ ಗಿಂತ ಹೆಚ್ಚು ಜಾಗ ಹೊಂದಿರಬಾರದು
  • ಈ ಕಾಡುಗಳಿಗೆ ಅರ್ಜಿ ಹಾಕುವಂತ ಕುಟುಂಬಗಳು ಸ್ವಂತ ಕಾರು ಅಥವಾ ನಾಲ್ಕು ಚಕ್ರದ ವಾಹನ ಮತ್ತು ಪಕ್ಕಾ ಮನೆ ಹಾಗೂ ಸ್ವಂತ ಎರಡು ಮೂರು ಗಿಂತ ಹೆಚ್ಚು ಫ್ಲಾಟ್ ಹೊಂದಿರಬಾರದು

 

(Ration card apply online) ರೇಷನ್ ಕಾರ್ಡ್ ಗೆ ಅರ್ಜೆ ಹಾಕಲು ಬೇಕಾಗುವಂತ ಅಗತ್ಯ ದಾಖಲೆಗಳು ?

ಹೌದು ಸ್ನೇಹಿತರೆ ನೀವೇನಾದರೂ ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಗಳಿಗೆ ಅರ್ಜಿ ಹಾಕಬೇಕು ಅಂದುಕೊಂಡಿದ್ದರೆ ಈ ದಾಖಲಾತಿಗಳು ನೀಡುವುದು ಕಡ್ಡಾಯವಾಗಿದೆ ಅವುಗಳ ವಿವರವನ್ನು ಈ ಕೆಳಗಿನಂತೆ ವಿವರಿಸಲಾಗಿದೆ

 

ಆಧಾರ್ ಕಾರ್ಡ್:- ಬಿಪಿಎಲ್ ಮತ್ತು AAY ರೇಷನ್ ಕಾರ್ಡ್ ಗಳಿಗೆ ಅರ್ಜಿ ಹಾಕಲು ಕಡ್ಡಾಯವಾಗಿ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ಗಳನ್ನು ನೀಡಬೇಕಾಗುತ್ತದೆ

ಹೌದು ಸ್ನೇಹಿತರೆ ಭಾರತದಲ್ಲಿ ವಾಸ ಮಾಡುವಂತ ಪ್ರತಿಯೊಬ್ಬ ಸದಸ್ಯನು ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ ಈ ಆಧಾರ್ ಕಾರ್ಡನ್ನು ಒಂದು ಭಾರತದ ಪ್ರಜೆ ಎಂದು ಗುರುತಿಸುವ ಮಾನದಂಡವಾಗಿ ಬಳಸಲಾಗುತ್ತಿದೆ

ವಿಳಾಸದ ಪುರಾವೆ:- ಹೌದು ಸ್ನೇಹಿತರೆ ಬಿಪಿಎಲ್ ಪಡಿತರ ಚೀಟಿ & AAY ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡಿದ್ದರೆ ನೀವು ಯಾವ ಪ್ರದೇಶದಲ್ಲಿ ವಾಸ ಮಾಡುತ್ತಿರಿ ಎಂಬ ಒಂದು ವಿಳಾಸದ ಪುರಾವೆ ನೀಡಬೇಕಾಗುತ್ತದೆ ಅಂದರೆ ನಿಮ್ಮ ಹತ್ತಿರ ಆಧಾರ್ ಕಾರ್ಡ್ ಆಗ್ಲಿ ಅಥವಾ ವೋಟರ್ ಐಡಿ , ಪಾನ್ ಕಾರ್ಡ್, ಈ ಮೂರು ಗುರುತಿನ ಆಧಾರಗಳಲ್ಲಿ ಯಾವುದಾದರೂ ಒಂದು ಆಧಾರವನ್ನು ನೀಡಿದರೆ ಸಾಕಾಗುತ್ತದೆ

ಜಾತಿ ಮತ್ತು ಆದಾಯ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಬಿಪಿಎಲ್ ಮತ್ತು ಅಂಥೋದೆಯ ರೇಷನ್ ಕಾರ್ಡ್ ಪಡೆಯಲು ನೀವು ಕಡ್ಡಾಯವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ ಏಕೆಂದರೆ ಈ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ನಿಮ್ಮ ವಾರ್ಷಿಕ ಆದಾಯ ಎಷ್ಟಿದೆ ಎಂಬ ಮಾಹಿತಿ ಸರಕಾರಕ್ಕೆ ದೊರೆಯುತ್ತದೆ ಇದರಲ್ಲಿ ನಿಮ್ಮ ಆದಾಯದ ಎಷ್ಟಿದೆ ಎಂಬ ಮಾಹಿತಿ ಸಿಗುತ್ತದೆ

ಭಾರತದಲ್ಲಿ ವಾಸ ಮಾಡುವಂತಹ ಪ್ರತಿಯೊಬ್ಬ ಸದಸ್ಯನು ಮತ್ತು ಕರ್ನಾಟಕದಲ್ಲಿ ವಾಸ ಮಾಡುವಂತಹ ಪ್ರತಿಯೊಬ್ಬ ಸದಸ್ಯರು ಕೂಡ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ತೆಗೆಸಿರಬೇಕಾಗುತ್ತದೆ ಕಾರಣ ಸರಕಾರದ ಅನೇಕ ಯೋಜನೆಗಳಲ್ಲಿ ಈ ದಾಖಲಾತಿಯನ್ನು ಕಡ್ಡಾಯವಾಗಿ ಕೇಳಲಾಗುತ್ತದೆ ಅದರಲ್ಲಿ ಎಸ್ ಟಿ & ಎಸ್ ಸಿ ಮತ್ತು ಅಲ್ಪಸಂಖ್ಯಾತರು ಹಾಗೂ ಸರಕಾರ ಕಡೆಯಿಂದ ಮೀಸಲಾತಿ ಪಡೆಯುವಂತ ಪ್ರತಿಯೊಬ್ಬರೂ ಕೂಡ ಈ ದಾಖಲೆಯನ್ನು ತೆಗೆಸುವುದು ಅತ್ಯಂತ ಮುಖ್ಯವಾಗಿರುತ್ತದೆ

ಮೊಬೈಲ್ ಸಂಖ್ಯೆ:- ಹೌದು ಸ್ನೇಹಿತರೇ, ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ನೀವು ಒಂದು ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ ಮತ್ತು ಈ ಮೊಬೈಲ್ ನಂಬರ್ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿದ್ದರೆ ಇನ್ನು ಉತ್ತಮ

ಜನನ ಪ್ರಮಾಣ ಪತ್ರ:- ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬಯಸುವಂತಹ ಕುಟುಂಬದಲ್ಲಿ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇದ್ದರೆ ಅಂತವರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸಿಕೊಳ್ಳಲು ಕಡ್ಡಾಯವಾಗಿ ಜನನ ಪ್ರಮಾಣ ಪತ್ರ ಕೇಳಲಾಗುತ್ತದೆ ನೆನಪಿರಲಿ ಇದು ಆರು ವರ್ಷಕ್ಕಿಂತ ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ

ಇತ್ತೀಚಿನ ಭಾವಚಿತ್ರ:- ಹೌದು ಸ್ನೇಹಿತರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ನೀವು ಇತ್ತೀಚಿಗೆ ತೆಗೆಸಿದ ಭಾವಚಿತ್ರ ಅಂದರೆ ಫೋಟೋ ನೀಡಬೇಕಾಗುತ್ತದೆ

 

(Ration card apply online) ರೇಷನ್ ಕಾರ್ಡ್ ಅರ್ಜಿ ಹಾಕಲು ಯಾವಾಗ ಪ್ರಾರಂಭ…?

ಹೌದು ಸ್ನೇಹಿತರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ತುಂಬಾ ಜನರು ಕಾಯುತ್ತಿದ್ದಾರೆ ಸರಕಾರ 2024ನೇ ವರ್ಷದಲ್ಲಿ ಎರಡು ಮೂರು ಸಲ ಅವಕಾಶ ಕೊಟ್ಟಿದ್ದರು ತಾಂತ್ರಿಕ ದೋಷದಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಸಾಧ್ಯವಾಗಿರಲಿಲ್ಲ

ಮತ್ತು ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಮೇ 1ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಕಲ್ಪಿಸಿಕೊಡಲಾಗುತ್ತೆ ಎಂಬ ಅಧಿಕೃತ ಮಾಹಿತಿ ಬಂದಿದ್ದರೂ ಕೂಡ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಕಲ್ಪಿಸಿಕೊಡಲಾಗಲಿಲ್ಲ ಕಾರಣ ಏನೆಂದರೆ, ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿರುವ ಕಾರಣದಿಂದ ನೀತಿ ಸಹಿತ ಜಾರಿಯಲ್ಲಿದೆ ಆದ್ದರಿಂದ ಮೇ 7ನೇ ತಾರೀಕು ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತದೆ

ಆದ್ದರಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಮೇ 7ನೇ ನಂತರ ಅವಕಾಶ ಕೊಡಬಹುದು ಎಂಬ ಮಾಹಿತಿ ಸಿಕ್ಕಿದೆ ಆದ್ದರಿಂದ ಪ್ರತಿಯೊಬ್ಬರೂ ಎಲ್ಲಾ ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಕೊಟ್ಟ ನಂತರ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಅಪ್ಡೇಟ್ ಮಾಡಲಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಪ್ರಯತ್ನ ಮಾಡಿ

ಹೌದು ಸ್ನೇಹಿತರೆ ಇದೆ ಮೇ ತಿಂಗಳಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲಾಗು ತಿದ್ದುಪಡಿಗೆ ಅವಕಾಶ ಕೊಡಲಾಗುತ್ತದೆ ಎಂಬ ಮಾಹಿತಿ ವರ ಬಂದಿದೆ ಪ್ರತಿಯೊಬ್ಬರೂ ಎಲ್ಲ ದಾಖಲಾತಿಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ

ಇದೇ ರೀತಿ ಹೊಸ ಸುದ್ದಿಗಳನ್ನು ತಿಳಿಯಲು ಹಾಗೂ ರೇಷನ್ ಕಾರ್ಡ್ಗೆ ಸಂಬಂಧಿಸಿದಂತೆ ಯಾವುದೇ ಅಪ್ಡೇಟ್ ಬಗ್ಗೆ ತಿಳಿಯಲು ನಮ್ಮ ವಾಟ್ಸಾಪ್  ಮತ್ತು ಟೆಲಿಗ್ರಾಮ್ ಗ್ರೂಪ್ಗಳಿಗೆ ಜೋಯಿನ್ ಆಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಇಲ್ಲಿವರೆಗೂ ಲೇಖನೆಯನ್ನು ಓದಿದ್ದಕ್ಕೆ ಧನ್ಯವಾದಗಳು

Leave a Reply

Your email address will not be published. Required fields are marked *

Back To Top