New Ration card correction :- ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕಣಜ ಮಾಧ್ಯಮದ ಈ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ಖುಷಿಯವೇನೆಂದರೆ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಎರಡು ದಿನಗಳ ಕಾಲಾವಕಾಶ ಮಾಡಿಕೊಳ್ಳಲಾಗಿದೆ . ಅದು ಯಾವ ದಿನ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ಎಲ್ಲಾ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ನೋಡಿ.
ಹೌದು ಗೆಳೆಯರೇ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೇಷನ್ ಕಾರ್ಡಿಗೆ ಇರುವ ಬೆಲೆ ಇನ್ನಷ್ಟು ಹೆಚ್ಚಿತು ಏಕೆಂದರೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಅಂದರೆ ಗೃಹಲಕ್ಷ್ಮಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹ ಜ್ಯೋತಿ ಯೋಜನೆ ಎಲ್ಲ ಯೋಜನೆಗಳಿಗೆ ರೇಷನ್ ಕಾರ್ಡ್ ಬಹುಮುಖ್ಯ ಪರವಾನಿಗೆ ಆಗಿದೆ.ಆದಕಾರಣ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ತುಂಬಾ ಜನರು ಕಾಯುತ್ತಿದ್ದಾರೆ.ಅಂತವರಿಗೆ ಸರ್ಕಾರ ಹೊಸ ವಿಷಯ ನೀಡಿದೆ ಅದು ಏನೆಂದರೆ ಎರಡು ದಿನಗಳ ಕಾಲ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಮತ್ತು ಏನಾದರೂ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
ಮೂರನೇ ಕಂತಿನ ಬೆಳೆ ಪರಿಹಾರ ಹಣ ಜಮಾ ಮಾಡಲಾಗಿದೆ! ಸ್ಟೇಟಸ್ ಚೆಕ್ ಮಾಡು ಈ ರೀತಿಯಾಗಿ ಮಾಡಿ
( New Ration card correction ) ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಯಾವಾಗ ಆರಂಭವಾಗುತ್ತದೆ ?
ಸ್ನೇಹಿತರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಮತ್ತು ಏನಾದರೂ ತಿದ್ದುಪಡಿ ಮಾಡಿಕೊಳ್ಳಲು ಸರ್ಕಾರವು ಎರಡು ದಿನಗಳ ಕಾಲ ಅವಕಾಶ ಮಾಡಿಕೊಡಲಾಗಿದೆ ಅಂದರೆ 02/07/2024 ರಿಂದ 03/07/2024 ರವರಿಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅವಕಾಶವನ್ನು ಸದುಪಯೋಗ ಮಾಡಿಕೊಂಡು ಎಲ್ಲಾ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಈ ಕೆಳಗಿನಂತಿವೆ.
( New Ration card correction ) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು…?
- ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ವಿಳಾಸದ ಪುರಾವೆ
- ಜನ್ಮ ದಿನಾಂಕ ( ಆರು ವರ್ಷದ ಒಳಗಿನ ಮಕ್ಕಳಿಗೆ ಮಾತ್ರ)
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.
ಸ್ನೇಹಿತರೆ ಎಲ್ಲ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡು ನಿಮ್ಮ ಹತ್ತಿರದ ಆಲಂಡ್ ಸೆಂಟರ್ಗಳಾದ ಕರ್ನಾಟಕ ಒನ್ , ಗ್ರಾಮ್ ಒನ್ , ಬೆಂಗಳೂರು ಒನ್ ಸಿ ಎಸ್ ಸಿ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಹಲವಾರು ತಾಂತ್ರಿಕ ದೋಷ ಅಥವಾ ಸರ್ವ ಸಮಸ್ಯೆ ಕಾಡುತ್ತದೆ ಆದ ಕಾರಣ ಆನ್ಲೈನ್ ಸೆಂಟರ್ಗಳಿಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಿ.
(New Ration card correction) ರೇಷನ್ ಕಾರ್ಡ್ ನಲ್ಲಿ ಯಾವೆಲ್ಲ ಬದಲಾವಣೆಗಳನ್ನು ಮಾಡಿಸಬಹುದು ?
- ಹೆಸರು ತಿದ್ದುಪಡಿ ಮಾಡಬಹುದು
- ಇನ್ನೊಬ್ಬರ ಹೆಸರು ಸೇರ್ಪಡೆ ಮಾಡಿಸಬಹುದು
- ಕುಟುಂಬದ ಯಜಮಾನಿಯನ್ನು ಬದಲಾವಣೆ ಮಾಡಬಹುದು
- ರೇಷನ್ ಕಾರ್ಡ್ ನಿಂದ ಸದಸ್ಯರನ್ನು ಡಿಲೀಟ್ ಮಾಡಬಹುದು
- ಈ ಕೆ ವೈ ಸಿ ಅಥವಾ ಇತರ ಸೇವೆಗಳನ್ನು ಸಹ ಮಾಡಿಕೊಳ್ಳಬಹುದು
ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಇದರ ಮೇಲೆ ಒತ್ತಿ.
ಗಮನಿಸಿ :- ಹೌದು ಸ್ನೇಹಿತರೆ, ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಇದೇ ರೀತಿಯ ಹೊಸ ಹೊಸ ವಿಚಾರಗಳು ಪರಿಚಯಿಸುತ್ತೇವೆ ಹಾಗೂ ಸರ್ಕಾರಿ ನೌಕರಿಗಳ ಬಗ್ಗೆ ಸರ್ಕಾರಿ ಯೋಜನೆಗಳ ಬಗ್ಗೆ ಅಪ್ಡೇಟ್ಸ್ ನೀಡುತ್ತೇವೆ ಆದ ಕಾರಣ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಕಂಡುಕೊಳ್ಳಿ.