SSP Scholarship: ಸ್ನೇಹಿತರೇ ಎಸ್ಎಸ್ಪಿ ವಿದ್ಯಾರ್ಥಿವೇತನದ ಮೂಲಕ ರಾಜ್ಯ ಸರ್ಕಾರವು ಹಿಂದುಳಿದ ಮತ್ತು ಬಡತನವನ್ನು ಹೊಂದಿರುವ ಮಕ್ಕಳಿಗೆ ಅವರ ಉನ್ನತ ಶಿಕ್ಷಣದ ಬೆಳವಣಿಗೆಗೆ ಆರ್ಥಿಕ ನೆರವನ್ನು ಒದಗಿಸುತ್ತದೆ. ವಿದ್ಯಾರ್ಥಿಗಳ ಮನೆಯಲ್ಲಿ ಬಡತನ ಇರುವುದರಿಂದ ಕುಟುಂಬಸ್ಥರು ಮಕ್ಕಳ ವಿದ್ಯಾಭ್ಯಾಸದ ಮೇಲೆ ಹೆಚ್ಚು ಹೂಡಿಕೆ ಮಾಡುವ ಸ್ಥಿತಿಯನ್ನು ಹೊಂದಿರುವುದಿಲ್ಲ, ಅದಕ್ಕೆ ರಾಜ್ಯ ಸರ್ಕಾರ ಎಸ್ಎಸ್ಪಿ (SSP) ವಿದ್ಯಾರ್ಥಿವೇತನದ ಮೂಲಕ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸುತ್ತದೆ.
ಹಾಗಾದರೆ ಎಸ್ಎಸ್ಪಿ ವಿದ್ಯಾರ್ಥಿವೇತನ ಪಡೆಯಲು ಯಾವ ವಿದ್ಯಾರ್ಥಿಗಳು ಅರ್ಹರು ಮತ್ತು ವಿದ್ಯಾರ್ಥಿಗಳ ಪೋಷಕರು ಸರ್ಕಾರಿ ಕೆಲಸದಲ್ಲಿದ್ದರೆ, ಅಂತಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹತೆಯನ್ನು ಪಡೆದುಕೊಳ್ಳುತ್ತಾರಾ ಎಂಬುದರ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ವಿವರವಾಗಿ ನೀಡಲಾಗಿದೆ, ತಪ್ಪದೆ ಪೂರ್ತಿಯಾಗಿ ಓದಿರಿ.
(SSP Scholarship) ಎಸ್ಎಸ್ಪಿ ವಿದ್ಯಾರ್ಥಿವೇತನದ ಅರ್ಜಿ ಸಲ್ಲಿಕೆಗೆ ಬೇಕಾಗುವ ಅರ್ಹತೆಗಳು?
- ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು
- ಅರ್ಜಿದಾರರು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಅಥವಾ ಇತರೆ ಹಿಂದುಳಿದ ವರ್ಗಗಳು (OBC) ವರ್ಗಕ್ಕೆ ಸೇರಿದವರಾಗಿರಬೇಕು
- ಅರ್ಜಿರಾರರು ರೂ. 2.5 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯವನ್ನು ಹೊಂದಿರಬೇಕು
- ಅರ್ಜಿದಾರರು ಹಿಂದಿನ ತರಗತಿಯ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕಾಗುತ್ತದೆ
- ಅರ್ಜಿದಾರರು 11th, 12th, ಐಟಿಐ ಅಥವಾ ಡಿಗ್ರಿ ಕೋರ್ಸ್ಗಳಲ್ಲಿ ಪ್ರವೇಶವನ್ನು ಪಡೆದಿರಬೇಕು
- ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳನ್ನು ಸಹ ಅರ್ಜಿ ಸಲ್ಲಿಕೆಯನ್ನು ಮಾಡಬಹುದು
SSP Scholarship ಸರ್ಕಾರಿ ನೌಕರರ ಮಕ್ಕಳು ಅರ್ಜಿ ಸಲ್ಲಿಸಬಹುದೇ?
ಇಲ್ಲ, ಗೆಳೆಯರೇ ನಿಮ್ಮ ಪೋಷಕರಲ್ಲಿ ಯಾರೆ ಆಗಲಿ ಒಬ್ಬರು ಅಥವಾ ಇಬ್ಬರು ನಿವೃತ್ತ ಸರ್ಕಾರಿ ನೌಕರಿ ಮಾಡುತ್ತಿದ್ದಾರೆ ಅಥವಾ ಪ್ರಸ್ತುತ ಸೇವೆಯಲ್ಲಿದ್ದರೆ, ಅಂತವರ ಮಕ್ಕಳು ಸರ್ಕಾರದ ಕಡೆಯಿಂದ ನೀಡುವ ಯಾವುದೇ ರೀತಿಯ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗಿರುವುದಿಲ್ಲ.
ವಿದ್ಯಾರ್ಥಿಗಳ ಪೋಷಕರು ನಿವೃತ್ತರಾಗದಿದ್ದರೂ ಸಹ ,ಸರ್ಕಾರಿ ನೌಕರರ ಮಕ್ಕಳು ಎಸ್ಎಸ್ಪಿ(SSP) ವಿದ್ಯಾರ್ಥಿವೇತನ ಅಥವಾ ಇನ್ನಾವುದೇ ವಿದ್ಯಾರ್ಥಿವೇತನಕ್ಕೆ(SCHOLERSHIP) ಗೆ ಅರ್ಜಿ ಸಲ್ಲಿಕೆ ಮಾಡಲು ಸಾದ್ಯವಿಲ್ಲ. ಆದಾಗ್ಯೂ, ತಂದೆಯ ಸರ್ಕಾರಿ ಪಿಂಚಣಿ ಯೋಜನೆಗಳ ಅಡಿಯಲ್ಲಿ ಪಿಂಚಣಿ ಪಡೆಯಲು ಮಕ್ಕಳು ಅವಕಾಶವನ್ನು ಹೊಂದಿರುತ್ತಾರೆ.
ಗಮನಿಸಿ :- ಹೌದು ಗೆಳೆಯರೇ ನಮ್ಮ ಮಾದ್ಯಮದಲ್ಲಿ ದಿನಾಲೂ ಇದೆ ರೀತಿಯ ಹೊಸ ಹೊಸ ಮಾಹಿತಿಗಳನ್ನು ಪ್ರಸಾರ ಮಾಡುತ್ತೇವೆ ಹಾಗೂ ಸರ್ಕಾರಿ ನೌಕರಿಗಳು, ಸರ್ಕಾರಿ ಯೋಜನೆಗಳು. ಮತ್ತು ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್ಷಿಪ್ ಬಗ್ಗೆ ಅಪ್ಡೇಟ್ ಮಾಡುತ್ತೇವೆ ಹಾಗಾಗಿ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್ ಆಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಕಂಡುಕೊಳ್ಳಿ.