ಮಹಿಳೆಯರಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಅಭಿವೃದ್ಧಿ ನಿಗಮವು ಹಲವು ಸಾಲ ಮತ್ತು ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ.
Women loan subsidy :- ಮಹಿಳೆಯರನ್ನು ಆರ್ಥಿಕವಾಗಿ ಸುಭದ್ರವಾಗಿ ಇಡಲು ಉದ್ಯೋಗ ಮತ್ತು ಉದ್ಯಮಿ ಕ್ಷೇತ್ರಗಳಿಗೆ ಸೆಳೆದು ಅವರಿಗೆ ಸ್ವತಂತ್ರ ಬದುಕಲು ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಅಭಿವೃದ್ಧಿ ನಿಗಮ ( Karnataka state women’s development corporation ) ಹಲವು ಸಾಲ ಮತ್ತು ಸಹಾಯಧನ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಗಿದೆ.
ಈ ಯೋಜನೆಗಳು ರಾಜ್ಯದ ವಿವಿಧ ಹಿನ್ನೆಲೆಗಳಿಂದ ಬಂದ ಮಹಿಳೆಯರಿಗೆ ಆಧಾರವಾಗುತ್ತದೆ. ಸಾಮಾನ್ಯವಾಗಿ ಹಿಡಿದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮತ್ತು ಲಿಂಗತ್ವಲ್ಪಸಂಖ್ಯಾತರ ಮಾಜಿದೇವ ದಾಸಿಯರ ವರೆಗೂ ಎಲ್ಲರಿಗೂ ಪ್ರತ್ಯೇಕವಾಗಿ ವಿನ್ಯಾಸಗೊಳಿಸುವ ಯೋಜನೆಗಳಿವೆ.
ರೈತರಿಗೆ ಉಚಿತ ಬೋರೆವೆಲ್ ಕೊರಸಲು ಸರ್ಕಾರದಿಂದ 3.5 ಲಕ್ಷ ರೊಪಾಯಿ ಸಹಾಯಧನ..! ಈ ರೀತಿಯಾಗಿ ಅರ್ಜಿ ಸಲ್ಲಿಸಿ.
ಈ ಎಲ್ಲಾ ಯೋಜನೆಗಳ ಪ್ರಮುಖ ಗುರಿ ಏನೆಂದರೆ ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವುದಾಗಿದೆ ಅವರ ಆರ್ಥಿಕ ಸ್ಥಿರತೆ ಆತ್ಮವಿಶ್ವಾಸ ಹೆಚ್ಚಿಸುವುದು ಸ್ವಂತ ಉದ್ಯಮ ಆರಂಭಿಸಲು ಬೇಕಾದ ಮೊತ್ತದಲ್ಲಿ ಸಾಲ ಹಾಕುವುಚಿತ ಸಹಾಯಧನ ನೀಡುವುದು ಹಾಗೂ ಅವರ ಸಾಮಾಜಿಕ ಪುನರ್ವಸತಿಗೆ ನೆರವಾಗುವುದು.
( Women loan subsidy ) ಮಹಿಳೆಯರಿಗಾಗಿ ಇರುವ ಸರ್ಕಾರಿ ಯೋಜನೆಗಳು.
- ಉದ್ಯೋಗಿನಿ ಯೋಜನೆ.
- ಧನಶ್ರೀ ಯೋಜನೆ
- ಚೇತನ ಯೋಜನೆ
- ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ.
( Udyogini scheme ) ಉದ್ಯೋಗಿನಿ ಯೋಜನೆ
ಮಹಿಳೆಯರು ಸ್ವಂತ ಉದ್ಯಮವನ್ನು ಆರಂಭಿಸಲು ಗಂಗಗಳ ಮೂಲಕ ಸಾಲ ಪಡೆಯುತ್ತದೆ ಸಹಾಯ ಮಾಡುವುದು ಮತ್ತು ಸಹಾಯಧನ ನೀಡುವುದು ಯೋಜನೆ ಮುಖ್ಯ ಗುರಿಯಾಗಿದೆ.
ಸ್ನೇಹಿತರೆ 1.5 ಲಕ್ಷ ವಾರ್ಷಿಕ ಆದಾಯ ಮಿತಿಯಲ್ಲಿರುವ ಕನಿಷ್ಠ 18 ವರ್ಷ ವಯಸ್ಸಿನ ಮೇಲ್ಪಟ್ಟ ನಗರ ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರು ಅರ್ಜಿ ಹಾಕಬಹುದು. ಸಾಮಾನ್ಯ ವರ್ಗದ ಮಹಿಳೆಯರಿಗೆ ಘಟಕಾವೇಚ್ಛ ಗರಿಷ್ಠ 3 ಲಕ್ಷ ಸಾಲ ಸೌಲಭ್ಯ ನೀಡಲಾಗುತ್ತದೆ ಇದರಲ್ಲಿ ಶೇಕಡ 30ರಷ್ಟು ಸಹಾಯಧನ ಸಿಗುತ್ತದೆ.
ಇನ್ನು ವಾರ್ಷಿಕ 2 ಲಕ್ಷ ಆದಾಯ ಮಿತಿಯಲ್ಲಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಘಟಕ ವೆಚ್ಚವಾಗಿ ಒಂದು ಲಕ್ಷದಿಂದ 3 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ ಇದರಲ್ಲಿ ಶೇಕಡ 50ರಷ್ಟು ಸಹಾಯಧನ ಸಿಗುತ್ತದೆ.
ಸಾಲ ನೀಡುವ ವಿಧಾನ :- ಬ್ಯಾಂಕುಗಳ ಮುಖಾಂತರ ಸಾಲ ನೀಡಲಾಗುತ್ತಿದೆ ನಿಗಮದ ಮುಖಾಂತರ ಸಹಾಯಧನ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
( Dhanashree Yojana ) ಧನಶ್ರೀ ಯೋಜನೆ
ಸಾಮಾನ್ಯ ವರ್ಗದ ಮಹಿಳೆಯರಿಗೆ ಉದ್ಯಮಿ ಪ್ರಾರಂಭ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹಿಳಾ ನಿಗಮದ ಮುಖಾಂತರ ಧನಶ್ರೀ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ಸ್ಥಳೀಯವಾಗಿ ಉದ್ಯಮಿ ಪ್ರಾರಂಭ ಮಾಡುವವರಿಗೆ ಈ ಯೋಜನೆ ಅಡಿ ₹30000 ರೂಪಾಯಿ ಪ್ರೋತ್ಸಾಹ ಧನ ಸಿಗಲಿದೆ 18ರಿಂದ 60 ವರ್ಷ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.
( Chetana scheme ) ಚೇತನ ಯೋಜನೆ
ಇದು ದಮಣಿತ ಅಥವಾ ಸಾಮಾಜಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವಾಲಂಬಿ ಬದುಕಿಗೆ ಉತ್ತೇಜನ ನೀಡುವ ವಿಶೇಷ ಯೋಜನೆಯಾಗಿದೆ. ಯೋಜನೆಯಲ್ಲಿ ಅರ್ಹ ಮಹಿಳೆಯರಿಗೆ ರೂ.30,000 ಪ್ರೋತ್ಸಾಹ ಧನ ನೇರವಾಗಿ ಲಭ್ಯವಾಗುತ್ತದೆ.
ಯಾವುದೇ ರೀತಿಯ ಉದ್ಯಮಿ ಅಥವಾ ಉದ್ಯಮ ಪ್ರಾರಂಭ ಮಾಡಲು ಬಯಸುವ ಕನಿಷ್ಠ 18 ವರ್ಷದಿಂದ ಮೇಲ್ಪಟ್ಟ ಮಹಿಳೆಯರು ಈ ಯೋಜನೆಯಲ್ಲಿ ಅರ್ಜಿ ಹಾಕಬಹುದು.
ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ.
ಲಿಂಗತ್ವಲ್ಪಸಂಖ್ಯಾತರ ಅಂದೆ ಮಂಗಳಮುಖಿಯರಿಗೂ ಆದಾಯೋತನ ಚಟುವಟಿಕೆ ಪ್ರಾರಂಭ ಮಾಡಲು ಆರ್ಥಿಕ ನೆರವು ನೀಡುವುದು ಈ ಯೋಜನೆ ಯ ಉದ್ದೇಶವಾಗಿದೆ ರೂ.30,000 ಉಚಿತ ಸಹಾಯಧನ ಸಿಗಲಿದ್ದು ಸ್ವಾಲಂಬಿ ಉದ್ಯಮ ಇಚ್ಛಾಶಕ್ತಿ ಇರುವ ಲಿಂಗತ್ವ ಅಲ್ಪಸಂಖ್ಯಾತರು ಇದರ ಪ್ರಯೋಜನ ಪಡೆಯಬಹುದು.
Women loan subsidy ಅರ್ಜಿ ಸಲ್ಲಿಸುವುದು ಹೇಗೆ ?
ಈ ಮೇಲ್ಕಾಣಿಸಿದ ಎಲ್ಲಾ ಯೋಜನೆಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಪ್ರತಿ ವರ್ಷ ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ಅರ್ಜಿ ಪ್ರಾರಂಭ ಮಾಡಲಾಗುತ್ತದೆ ಸರ್ಕಾರಿ ಸೇವಾ ಸಿಂಧು ಪೋರ್ಟಲ್ ಬಳಸಿಕೊಂಡು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಅಥವಾ ನಿಮ್ಮ ಹತ್ತಿರವಿರುವ ಬಾಪೂಜಿ ಸೇವ ಕೇಂದ್ರ, ಗ್ರಾಮ್ ಒನ್, ಕರ್ನಾಟಕ ಒನ್ , ಬೆಂಗಳೂರು ಒನ್, ಇಂತಹ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ನಿಗಮದ ಅಧಿಕೃತ ವೆಬ್ಸೈಟ್ kswdc.karnataka.gov.i
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿಗಳಿಗಾಗಿ ಹಾಗೂ ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ WHATSAPP AND TELEGRAM ಗ್ರೂಪ್ಗಳಿಗೆ ಸೇರಿಕೊಳ್ಳಿ.